ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ ಮನೆಯೊಂದು ಬರೋಬ್ಬರಿ 45 ಅಡಿ ಹಿಂದಕ್ಕೆ ಸರಿದಿದೆ!
ಗಾಬರಿಯಾಗಬೇಡಿ, ಇದು ಅದಾಗಿ ಸರಿದಿರುವುದಲ್ಲ, ಇದನ್ನು ಹರಿಯಾಣ ಕುರುಕ್ಷೇತ್ರ ಮೂಲದ ಶ್ರೀರಾಮ್ ಬಿಲ್ಡಿಂಗ್ ಲಿಫ್ಟಿಂಗ್ ಕಂಪನಿ ಸುರಕ್ಷಿತವಾಗಿ ಹಿಮದಕ್ಕೆ ಸರಿಸಿರುವುದು.
ಎಲ್‌ಐಸಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನಿವೃತ್ತರಾದ ಮಾವೇಲಿಕ್ಕರ ಪೊನ್ನರಂತೋಟ್ಟಂನ ನಿವಾಸಿ ರಾಮಚಂದ್ರನ್ ನಾಯರ್ ಎಂಬವರು ನಾಲ್ಕು ವರ್ಷದ ಹಿಂದೆ ಅಲಪ್ಪುಳದ ಪಲ್ಲರಿಮಂಗಲಂ ಪರಿಸರದಲ್ಲಿ ಕಾಂಕ್ರೀಟ್ ಮನೆ ಇರುವ 26 ಸೆಂಟ್ಸ್ ಜಮೀನನ್ನು ಖರೀದಿಸಿದ್ದರು. ಮನೆ ಮುಂಭಾಗದಲ್ಲಿದ್ದು, ಹಿಂದೆ ಸಾಕಷ್ಟು ಜಾಗ ಹೊಂದಿದ್ದ ಈ ಭೂಮಿಯಲ್ಲಿ ರಸ್ತೆ ಕೂಡಾ ಮನೆ ಸಮೀಪದಲ್ಲಿಯೇ ಹಾದುಹೋಗುತ್ತಿದೆ. ಇದರಿಂದ ಅಡಚಣೆ ಎದುರಿಸಿದ ನಾಯರ್, ಮನೆಯನ್ನು ಕೆಡವದೇ ಇದಕ್ಕೊಂದು ಪರಿಹಾರ ಚಿಂತಿಸುತ್ತಿದ್ದರು. ಈ ಸಂದರ್ಭ ಹರಿಯಾಣದ ಲಿಫ್ಟಿಂಗ್ ಕಂಪನಿ ಇವರ ನೆರವಿಗೆ ಬಂದಿದ್ದು, 1100 ಚದರ ಅಡಿಯ ಮನೆಯನ್ನು ಅಡೆತಡೆಗಳಿಲ್ಲದೆ, ಸುರಕ್ಷಿತವಾಗಿ 45 ಅಡಿ ಹಿಂದಕ್ಕೆ ಮತ್ತು 5 ಅಡಿ ಬದಿಗೆ ಸರಿಸಲಾಗಿದೆ.
ಒಟ್ಟು 45 ದಿನಗಳ ಕಾಲ ನಡೆದ ಸ್ಥಳಾಂತರ ಪ್ರಕ್ರಿಯೆಯಲ್ಲಿ ಆರು ಮಂದಿ ನೌಕರರು ಇದ್ದರು. ಇದಕ್ಕಾಗಿ ಸುಮಾರು ಎಂಟು ಲಕ್ಷ ರೂ. ವೆಚ್ಚ ತಗುಲಿದೆ.