ಪವಿತ್ರ ಜಯರಾಮ್, ಚಂದು ನಡುವಿನ ಒಡನಾಟ ಹೇಗಿತ್ತು?: ಅಮ್ಮನ ಕುರಿತು ಮಗನ ಪ್ರತಿಕ್ರಿಯೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

‘ತ್ರಿನಯನಿ’ ಧಾರಾವಾಹಿಯಲ್ಲಿ ಜನಪ್ರಿಯರಾಗಿದ್ದ ಕನ್ನಡತಿ ಪವಿತ್ರ ಜಯರಾಮ್ ಅವರು ಅಪಘಾತದಲ್ಲಿ ಮೃತಪಟ್ಟ ಬೆನ್ನಲ್ಲೇ ನಟ ಚಂದ್ರಕಾಂತ್‌ (Chandrakanth) ಆತ್ಮಹತ್ಯೆ ಮಾಡಿಕೊಂಡರು.

ಇದಾದ ಬಳಿಕ ಈ ಘಟನೆಯಿಂದ ಖಿನ್ನತೆಗೊಳಗಾಗಿ ಚಂದ್ರಕಾಂತ್‌ ಅವರು ನೇಣಿಗೆ ಶರಣಾಗಿದ್ದಾರೆ ಎಂದು ವರದಿಯಾಗಿತ್ತು. ಚಂದು ಮತ್ತು ಪವಿತ್ರಾ ಮದುವೆ ಆಗಲು ನಿರ್ಧರಿಸಿದ್ದರು ಎಂಬ ಸುದ್ದಿ ಹರಿದಾಡಿದೆ.

ಆ ಬಗ್ಗೆ ಪವಿತ್ರಾ ಜಯರಾಮ್​ ಅವರ ಪುತ್ರ ಪ್ರಜ್ವಲ್​ ಪ್ರತಿಕ್ರಿಯೆ ನೀಡಿದ್ದಾರೆ ʻಅಮ್ಮನಿಗೆ ಊರಿನ ಜತೆ ಒಡನಾಟ ತುಂಬ ಚೆನ್ನಾಗಿಯೇ ಇತ್ತು. ಚಿತ್ರರಂಗ ಎಂದರೆ ನಿಮಗೆ ಗೊತ್ತು. ನಾನು ಇಂಡಸ್ಟ್ರಿಗೆ ಬಂದರೂ ನನ್ನ ಜತೆ ಯಾರಾದರೂ ಇದ್ದಾರೆ ಅಂದರೆ ಫಸ್ಟ್‌ ಈ ರೀತಿ ರೂಮರ್ಸ್‌ ಹುಟ್ಟಿಕೊಳ್ಳುತ್ತೆ. ಚಂದ್ರಕಾಂತ್‌ ಕುಟುಂಬ ಕೂಡ ಬೇಸರದಲ್ಲಿದೆ. ಅಮ್ಮ ಮತ್ತು ಚಂದು ಅವರು ಎಷ್ಟು ಒಳ್ಳೆಯ ಸ್ನೇಹಿತರು ಎಂಬುದು ನಮಗೆ ಮತ್ತು ಇಂಡಸ್ಟ್ರಿಯವರಿಗೆ ಗೊತ್ತು. ಅವರ ಒಡನಾಟ ಹೇಗಿತ್ತು ಅಂತ ನಾವು ನೋಡಿದ್ದೇವೆ. ಮದುವೆ ಆಗುವ ಪ್ಲ್ಯಾನ್​ ಇತ್ತು ಎಂಬುದನ್ನೆಲ್ಲ ನಾನು ಸಂದರ್ಶನದಲ್ಲಿ ನೋಡಿದೆ. ಆದರೆ ಅಷ್ಟೊಂದು ಮಾತುಕತೆ ಆಗಿರಲಿಲ್ಲ. ಅಷ್ಟೊಂದು ನಮಗೂ ಗೊತ್ತಿರಲಿಲ್ಲ ಎಂದರು.

ಚಂದ್ರಕಾಂತ್‌ ಪತ್ನಿ ಹೇಳಿದ್ದೇನು?
ಚಂದ್ರಕಾಂತ್‌ ಪತ್ನಿ ಶಿಲ್ಪಾ ಪ್ರೇಮಾ ಈ ಬಗ್ಗೆ ಮಾತನಾಡಿ ಇಬ್ಬರ ಮಧ್ಯೆ ಸಂಬಂಧ ಇರುವುದು 5 ವರ್ಷ ಮುಂಚೆಯೇ ತಿಳಿದಿತ್ತು. ನನಗೆ ಗೊತ್ತಾದ ಮೇಲೆ ರಾತ್ರಿಯೆಲ್ಲ ಕುಡಿದು ನನಗೆ ಚಂದ್ರಕಾಂತ್‌ ಹೊಡೆಯುತ್ತಿದ್ದರು. ಒಮ್ಮೆ ಪವಿತ್ರಾ ಕೂಡ ನನಗೆ ನೇರವಾಗಿ ಕೆರೆ ಮಾಡಿ ಅವನು ನನ್ನ ಗಂಡ, ಏನು ಮಾಡಿಕೊಳ್ಳುತ್ತೀಯಾ ಮಾಡಿಕೋ ಎಂದು ಹೇಳಿದ್ದಳು. ಈ ವಿಚಾರ ಪವಿತ್ರಾ ಮಕ್ಕಳಿಗೂ ಗೊತ್ತಿತ್ತು. ಅವರ ಲೈಫ್ ಅವರದ್ದು ಅವರ ವಿಚಾರಕ್ಕೆ ಆಕ್ಷೇಪ ವ್ಯಕ್ತಪಡಿಸಲ್ಲ ಎಂದು ಪವಿತ್ರಾ ಮಗ ಹೇಳಿದ್ದ. ಮನೆಗೆ ಬಂದರೂ ಪವಿತ್ರಾ ಫೋಟೊವನ್ನು ಚಂದ್ರಕಾಂತ್‌ ನೋಡುತ್ತಿದ್ದರು. ಇವರೂ ನನಗೆ ಸಹಾಯ ಮಾಡದೇ ಇದ್ದರೂ ನನ್ನ ಮಕ್ಕಳನ್ನು ನಾನೇ ಸಲುಹಿದೆ ಎಂದಿದ್ದರು.

ಪವಿತ್ರಾ ಮಗಳ ಸ್ಪಷ್ಟನೆ ಏನು?
ಮಗಳು ಪ್ರತೀಕ್ಷಾ ಮಾತನಾಡಿ ʻ ಚಂದ್ರಕಾಂತ್‌ ಅವರ ಸಾವಿನ‌ ಸುದ್ದಿ ನಮಗೆ ಟಿವಿಯಲ್ಲಿ ನೋಡಿ ಗೊತ್ತಾಯ್ತು. ಚಂದ್ರಕಾಂತ್‌ ಮತ್ತು ನಮ್ಮಮ್ಮ‌ ಉತ್ತಮ ಸ್ನೇಹಿತರಾಗಿದ್ದರು. ಅವರ ಸಂಬಂಧದ ಬಗ್ಗೆ ಟಿವಿಯಲ್ಲಿ ಏನೇನೋ ಮಾತಾಡ್ತಿದ್ದಾರೆ. ಅಮ್ಮನ ಅಂತ್ಯಕ್ರಿಯೆ ಆಗೋವವರೆಗೂ ಚಂದ್ರಕಾಂತ್‌ ಇದ್ದು ಹೋಗಿದ್ದರು. ಚಂದ್ರಕಾಂತ್‌ ಅವರು ಹೈದರಾಬಾದ್‌ಗೆ ಹೋದ ನಂತರವೂ ನನಗೆ ಪೋನ್ ಮಾಡಿ ಮಾತನಾಡುತ್ತಿದ್ದರು. ಆರೋಗ್ಯ ಚೆನ್ನಾಗಿ ನೋಡ್ಕೊ, ಪರೀಕ್ಷೆ ಇದೆ ತಯಾರಿ ಮಾಡ್ಕೊ ಎಂದೆಲ್ಲಾ ಧೈರ್ಯ ಹೇಳ್ತಿದ್ದರು. ಆದರೆ ಈಗ ಹೀಗಾಗಿದೆ. ಅಮ್ಮ ಮತ್ತು ಚಂದ್ರಕಾಂತ್‌ ಉತ್ತಮ ಸ್ನೇಹಿತರಾಗಿದ್ದರು. ಅಮ್ಮ ಹೈದರಾಬಾದ್‌ಗೆ ತೆರಳಿ ಆರು ವರ್ಷ ಆಯ್ತು. ಆಗನಿಂದಲೂ ಚಂದ್ರಕಾಂತ್‌ ಅಮ್ಮನಿಗೆ ಪರಿಚಯ. ಒಂದೇ ಸಿರೀಯಲ್ ನಲ್ಲಿ ನಟನೆ ಮಾಡುವ ಸಹ ನಟರ ಜತೆಗಿನ ಸಂಬಂಧ ಹೇಗಿರೋತ್ತೊ ಅಮ್ಮ ಮತ್ತು ಚಂದ್ರಕಾಂತ್‌ ಅವರ ಸಂಬಂಧವೂ ಹಾಗೆ ಇತ್ತುʼ ಎಂದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!