ಭಾರತದ ಚಿರಾಗ್‌-ಸಾತ್ವಿಕ್‌ ಜೋಡಿಗೆ ಥಾಯ್ಲೆಂಡ್‌ ಓಪನ್‌ ಚಾಂಪಿಯನ್​ ಪಟ್ಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಥಾಯ್ಲೆಂಡ್‌ ಓಪನ್‌ ಸೂಪರ್‌ 500 ಬ್ಯಾಡ್ಮಿಂಟನ್‌(Thailand Open 2024) ಫೈನಲ್​ ಪಂದ್ಯದಲ್ಲಿ ಭಾರತದ ಸ್ಟಾರ್‌ ಡಬಲ್ಸ್‌ ಬ್ಯಾಡ್ಮಿಂಟನ್​ ಆಟಗಾರರಾದ ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಗೆದ್ದು ಚಾಂಪಿಯನ್​ ಪಟ್ಟ ಅಲಂಕರಿಸಿದ್ದಾರೆ.

ಏಕಪಕ್ಷೀಯವಾಗಿ ಸಾಗಿದ ಫೈನಲ್​ ಪಂದ್ಯದಲ್ಲಿ ಏಷ್ಯಾಡ್‌ ಚಾಂಪಿಯನ್‌ ಹಾಗೂ ಕೂಟದ ಅಗ್ರ ಶ್ರೇಯಾಂಕಿ ಭಾರತೀಯ ಜೋಡಿ ಚೀನದ ಚೆನ್‌ ಬೊ ಯಾಂಗ್‌-ಲಿಯು ಯಿ(Chen Bo Yang-Liu Yi) ವಿರುದ್ಧ 21-15, 21-15 ನೇರ ಗೇಮ್​ಗಳಿಂದ ಹಿಮ್ಮೆಟಿಸಿದರು.

ಶನಿವಾರ ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ ಚಿರಾಗ್‌- ಸಾತ್ವಿಕ್‌ ಜೋಡಿ ಚೈನೀಸ್‌ ತೈಪೆಯ ಲು ಮಿಂಗ್‌ ಚೆ-ಟಾಂಗ್‌ ಕೈ ವೀ ವಿರುದ್ಧವೂ 21-11, 21-12 ಅಂತರದ ಸುಲಭ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. ಫೈನಲ್​ನಲ್ಲಿಯೂ ಇದೇ ಪ್ರದರ್ಶನ ತೋರಿ ಪ್ರಶಸ್ತಿಗೆ ಮುತ್ತಿಕ್ಕಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!