ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಹಿಂದು ಹಿತ ಮರೆತು, ಮುಸ್ಲಿಂ ತುಷ್ಟೀಕರಣ ನೀತಿ ಅನುಸರಿಸುತ್ತಿರುವುದು ಆತಂಕಕಾರಿ ಸಂಗತಿ ಎಂದು ವಿಶ್ವ ಹಿಂದೂ ಪರಿಷತ್ತನ ಕೇಂದ್ರಿಯ ಸಂಘಟನಾ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಹೇಳಿದರು.
ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಇರಲಿ, ರಾಜ್ಯವಿರಲಿ ಆಡಳಿತ ನಡೆಸುವ ಸರ್ಕಾರಗಳು ಹಿಂದು ಹಿತ ಕಾಪಾಡಬೇಕು. ಏಕೆಂದರೆ, ಹಿಂದು ಹಿತದಲ್ಲಿಯೇ ದೇಶದ ಹಿತವಿದೆ ಎಂದರು.
ಕಳೆದ ಆರೇಳು ತಿಂಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಆತಂಕ ತಂದಿದೆ. ರಾಜ್ಯ ಸರ್ಕಾರ ಸಂಪೂರ್ಣವಾಗಿ ಮುಸ್ಲಿಂ ತುಷ್ಟೀಕರಣ ನೀತಿ ಅನುಸರಿಸುತ್ತಿರುವ ಪರಿಣಾಮ ರಾಜ್ಯದ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಕಲಬುರ್ಗಿ ಸೇರಿದಂತೆ ಹಲವೆಡೆ ನಡೆದ ಘಟನೆಗಳು ಕಳವಳಕಾರಿ ಎಂದು ಹೇಳಿದರು.
ಹಿಂದು ಸಮಾಜದ ಮಹಿಳೆಯರು, ಹಿಂದುಳಿದ ಹೆಣ್ಣು ಮಕ್ಕಳ ಮೇಲೆ ಅಕ್ರಮಣಗಳಾಗಿವೆ, ಬಲಾತ್ಕಾರ ಆಗಿವೆ, ಹತ್ಯೆಯಾಗಿವೆ. ಗೋಹತ್ಯೆ ಪ್ರಕರಣ ಹೆಚ್ಚಾಗಿವೆ. ಗೋರಕ್ಷಕರ ಮೇಲೆ ಶಿಕ್ಷೆತಾಗುತ್ತಿದೆ. ಸಾಧು ಸಂತರು, ಮಹಿಯರು ಸುರಕ್ಷಿತವಾಗಿಲ್ಲ ಎಂದು ಅವರು ಹೇಳಿದರು.
ಹಿಂದೂ ದ್ವೇಷದ ಪ್ರೇರಿತವಾಗಿರುವ ರಾಜ್ಯ ಸರ್ಕಾರ ಮುಸ್ಲಿಂ ತುಷ್ಟೀಕರಣಕ್ಕೆ ಮುಂದಾಗಿರುವುದನ್ನು ಖಂಡಿಸಿದ ಅವರು, ರಾಜ್ಯದ ಹಿಂದು ಸಮಾಜ ಯೋಚನೆ ಮಾಡಬೇಕೃಂದು ಮಿಲಿಂದ್ ಪರಾಂಡೆ ಕರೆಕೊಟ್ಟರು.
ಇದೇ ಪರಿಸ್ಥಿತಿ ಪಶ್ಚಿಮ ಬಂಗಾಳ ರಾಜ್ಯದಲ್ಲಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹಿಂದು ಸಮಾಜವನ್ನು ಅನುಮಾನಿಸುತ್ತಿದ್ದಾರೆ. ದೇಶದ ಬಹುದೊಡ್ಡ ಹಿಂದು ಧಾರ್ಮಿಕ ಕೇಂದ್ರಗಳಾದ ಭಾರತ ಸೇವಾಶ್ರಮ, ಇಸ್ಕಾನ್ ಹಾಗೂ ರಾಮಕೃಷ್ಣ ಮಿಷನ್ ಆಶ್ರಮ ಸಂಸ್ಥೆಗಳಿಗೆ ತುಂಬಿದ ಬೃಹತ್ ವೇದಿಕೆಯಲ್ಲಿಯೇ ಮಮತಾ ಬ್ಯಾನರ್ಜಿ ಅವರು ಬೆದರಿಕೆ ಹಾಕಿದ್ದಾರೆ. ಚುನಾವಣೆ ಮುಗಿದ ಮೇಲೆ ನೋಡಿಕೊಳ್ಳುವುದಾಗಿ ಮುಖ್ಯಮಂತ್ರಿ ಹುದ್ದೆಯಲ್ಲಿದ್ದುಕೊಂಡು ಬೆದರಿಕೆ ಹಾಕಿರುವುದು ದುರದೃಷ್ಟಕರ ಎಂದು ಹೇಳಿದರು.
ಹಿಂದು ಹಿತ ಮರೆತು ಮತ ಚಲಾಯಿಸಿದರೆ ಏನಾಗುತ್ತದೆ ಎಂಬುದಕ್ಕೆ ಕರ್ನಾಟಕ ಮತ್ತು ಪಶ್ಚಿಮ ಬಂಗಾಳ ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳೇ ಸಾಕ್ಷಿ. ಹೀಗಾಗಿ, ಲೋಕಸಭಾ ಚುನಾವಣೆ ಕಾರಖಂಡದಲ್ಲಿ ಇನ್ನುಳಿದ ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಹಿಂದು ಸಮಾಜದ ಬಾಂಧವರು ಹಿಂದು ಹಿತ ಕಾಯುವ ಅಭ್ಯರ್ಥಿಗೆ ಮತ ನೀಡಬೇಕೆಂದು ಅವರು ಕರೆ ನೀಡಿದರು.
ದೇಶದಲ್ಲಿ ಎಲ್ಲೆಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆಯೋ ಅಲ್ಲಿ ಹಿಂದುಗಳು ಜಾಗೃತರಾಗಿ ಹಿಂದುಗಳ ರಕ್ಷಣೆ ಮಾಡುವ ಪಕ್ಷವನ್ನು ಗೆಲ್ಲಿಸಬೇಕು.
ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ಬರಬೇಕು. ಸಿಎಎ ಕಾಯ್ದೆಯೂ ಜಾರಿಗೆ ಬರಬೇಕು. ಪಾಕಿಸ್ತಾನ, ಬಾಂಗ್ಲಾದೇಶದಿಂದ ಬಂದಿರುವ ಜೈನ್, ಸಿಖ್ ಅವರಿಗೆ ಭಾರತೀಯ ಪೌರತ್ವ ನೀಡಬೇಕು ಎಂದು ಹೇಳಿದರು.
ಹಿಂದು ದೇವಾಲಯಗಳ ಮೇಲೆ ಸರಕಾರದ ನಿಯಂತ್ರಣ ಮಾಡುತ್ತಿರುವುದು ನಮ್ಮ ಮೇಲೆ ಹಿಂದುಗಳು ಮೇಲೆ ದಬ್ಬಾಳಿಕೆ ನಡೆಸುತ್ತಿವೆ. ಅದೇ ಅಲ್ಪಸಂಖ್ಯಾತರ ಮಂದಿರಗಳನ್ನು ಏಕೆ ಪಡೆಯುತ್ತಿಲ್ಲ. ಬರುವ ದಿನಗಳಲ್ಲಿ ಹಿಂದು ದೇವಾಲಯಗಳ ರಕ್ಷಣೆಗೆ ವಿಶ್ವ ಹಿಂದೂ ಪರಿಷತ್ ನಿರಂತರ ಕೆಲಸ ಮಾಡಲಾಗುವುದು ಎಂದರು.
ಅಯೋಧ್ಯೆಯಲ್ಲಿ ಶ್ರೀರಾಮನ ಬಾಲ ಮೂರ್ತಿ ಪ್ರತಿಷ್ಠಾಪನೆಯಾದಾಗಿನಿಂದ ದೇಶದಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಎಂದು ಮಿಲಿಂದ್ ಪರಾಂಡೆ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಶ್ವ ಹಿಂದೂ ಪರಿಷತ್ ನ ಜಿಲ್ಲಾ ಅಧ್ಯಕ್ಷ ಪ್ರಮೋದ್ ಕುಮಾರ್ ಒಕ್ಕುಂದಮಠ, ಜಿಲ್ಲಾ ಕಾರ್ಯದರ್ಶಿ ಆನಂದ್ ಕರಲಿಂಗಣ್ಣನವರ, ಪ್ರಾಂತ ಕೋಶಾಧ್ಯಕ್ಷರಾದ ಕೃಷ್ಣ ಭಟ್, ಶ್ರೀಕಾಂತ್ ಕದಂ, ಶಿವಕುಮಾರ್ ಬೋಳಶೆಟ್ಟಿ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.