ಹೊಸದಿಗಂತ ಬಸವಕಲ್ಯಾಣ:
ಕಂಟೆನರ್ ಲಾರಿ, ಕಾರು ಹಾಗೂ ಮತ್ತೊಂದು ಲಾರಿ ನಡುವೆ ನಡೆದ ಸರಣಿ ರಸ್ತೆ ಅಪಘಾತದಲ್ಲಿ ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಪ್ರಾಣಾಪಾಯದಿಂದ ಪಾರಾದ ಘಟನೆ ತಾಲೂಕಿನ ತಡೋಳಾ ಗ್ರಾಮದ ಸಮೀಪ ಜರುಗಿದೆ.
ರಾಷ್ಟ್ರೀಯ ಹೆದ್ದಾರಿ-65ರ ಮಾರ್ಗವಾಗಿ ಚಿಟಗುಪ್ಪ ಪಟ್ಟಣಕ್ಕೆ ತಮ್ಮ ಕಾರಿನಲ್ಲಿ ತೆರಳುತಿದ್ದ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಕಂಟೇನರ್ ಲಾರಿ ಡಿಕ್ಕಿಯಾಗಿ ಘಟನೆ ಸಂಭವಿಸಿದೆ. ಕಾರಿಗೆ ಡಿಕ್ಕಿಯಾದ ಕಂಟೇನರ್ ಲಾರಿ ಮತ್ತೊಂದು ಲಾರಿಗೂ ಸಹ ಡಿಕ್ಕಿಯಾಗಿ ಪಲ್ಟಿಯಾಗಿದೆ. ಘಟನೆಯಲ್ಲಿ ಶ್ರೀಗಳಿಗೆ ಯಾವುದೇ ಗಾಯಗಳಾಗದೆ ಪ್ರಾಣಾಪಯದಿಂದ ಪಾರಾಗಿದ್ದು, ಶ್ರೀಗಳು ಪೂರ್ವನಿಯೋಜಿತ ಕಾರ್ಯಕ್ರಮಕ್ಕೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.
ಸುದ್ದಿ ತಿಳಿದ ಸಂಚಾರಿ ಠಾಣೆ ಪಿಎಸ್ಐ ಸುವರ್ಣಾ ಮಲಶಟ್ಟಿ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದ್ದು, ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.