ಅಯೋಧ್ಯೆ ಶ್ರೀರಾಮನಿಗೆ ಭಕ್ತರಿಂದ ಬಂತು ಪ್ರೀತಿಯ ಕಾಣಿಕೆ: ಬೆಳ್ಳಿಯ ಬಿಲ್ಲು-ಬಾಣ ಸಮರ್ಪಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜನವರಿ 22 ರಂದು ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆಯಿತು. ವರ್ಷಗಳ ಕೋರಿಕೆಯ ನಂತರ, ಲಕ್ಷಾಂತರ ಭಕ್ತರು ಅಯೋಧ್ಯೆಯಲ್ಲಿ ಶ್ರೀರಾಮನ ಸಿಂಹಾಸನಾರೋಹಣವನ್ನು ವೀಕ್ಷಿಸಿದರು.

ಮೈಸೂರಿನ ಅರುಣ್ ಯೋಗಿರಾಜ್ ಎಂಬ ಕರ್ನಾಟಕದ ಶಿಲ್ಪಿ ಶ್ರೀರಾಮನ ವಿಗ್ರಹವನ್ನು ಕೆತ್ತಿದ್ದು ನಮಗೆಲ್ಲರಿಗೂ ಹೆಮ್ಮೆ. ಇದೀಗ, ಬೆಂಗಳೂರಿನ ಭಕ್ತರು ಅಯೋಧ್ಯೆಯಲ್ಲಿ ಶ್ರೀರಾಮನಿಗೆ ಬೆಳ್ಳಿ ಬಿಲ್ಲು ಮತ್ತು ಬಾಣಗಳನ್ನು ಅರ್ಪಿಸಿದ್ದಾರೆ.

ಅತ್ಯಂತ ಸುಂದರವಾದ ಮತ್ತು ಆಕರ್ಷಕವಾದ ಬೆಳ್ಳಿಯ ಬಿಲ್ಲು ಮತ್ತು ಬಾಣವನ್ನು ಶೃಂಗೇರಿ ಶ್ರೀಗಳಿಂದ ಆಶೀರ್ವದಿಸಿದರು. ನಂತರ ಅದನ್ನು ಅಯೋಧ್ಯೆಗೆ ಕಳುಹಿಸಲಾಗುವುದು.

ಶೃಂಗೇರಿ ಹಿರಿಯ ಶ್ರೀ ಭಾರತೀ ತೀರ್ಥ ಮಹಾಸ್ವಾಮೀಜಿ ಅವರು ಪೂಜೆ ಸಲ್ಲಿಸಿದರೆ, ಕಿರಿಯ ಶ್ರೀಗಳು ಬೆಳ್ಳಿಯ ಬಿಲ್ಲು-ಬಾಣವನ್ನ ಕೈಯಲ್ಲಿ ಹಿಡಿದು ನೋಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!