ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೂನ್ ಮೊದಲ ವಾರ ಮದ್ಯಪ್ರಿಯರಿಗೆ ಶಾಕ್ ಕಾದಿದೆ.
ಜೂನ್ ಮೊದಲ ವಾರ ನೀವು ಮದ್ಯದ ಮಳಿಗೆಗಳ ಬಳಿ ಹೋದರೆ ನಿರಾಸೆಯಿಂದ ವಾಪಸಾಗಬೇಕಾಗುತ್ತದೆ, ಏಕೆಂದರೆ ಜೂನ್ ಮೊದಲ ವಾರದಲ್ಲಿ ಮದ್ಯ ಸಿಗುವುದಿಲ್ಲ.
ವಿಧಾನ ಪರಿಷತ್ ಚುನಾವಣೆ ಮತ್ತು ಲೋಕಸಭೆ ಚುನಾವಣೆ ಮತ ಎಣಿಕೆ ಇರುವುದರಿಂದ ಜೂನ್ 1 ರಿಂದ 6ರ ವರೆಗೆ ಮದ್ಯದ ಮಾರಾಟವನ್ನು ಬಂದ್ ಮಾಡುವಂತೆ ಬೆಂಗಳೂರು ಜಿಲ್ಲಾಡಳಿತ ಆದೇಶ ಹೊರಡಿಸಿದೆ.