ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ದಶಕದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಷ್ಟು ಸಕಾರಾತ್ಮಕ ಬದಲಾವಣೆಯನ್ನು ಬೇರೆ ಯಾವುದೇ ವಿಶ್ವ ನಾಯಕರು ಜನರ ಜೀವನದಲ್ಲಿ ತಂದಿಲ್ಲ ಎಂದು ಜೆಫರೀಸ್ ಸಂಸ್ಥೆಯ ಕ್ರಿಸ್ಟೋಫರ್ ವುಡ್ ಶ್ಲಾಘಿಸಿದರು.
ಕ್ರಿಸ್ಟೋಫರ್ ವುಡ್ ತನ್ನ ಇತ್ತೀಚಿನ ವರದಿಯಾದ ಗ್ರೀಡ್ ಅಂಡ್ ಫಿಯರ್‌ನಲ್ಲಿ ವಿದೇಶಿ ಮಾಧ್ಯಮಗಳು ಚುನಾವಣೆಯಲ್ಲಿ ಬಿಜೆಪಿ ಉತ್ತಮವಾಗಿ ಕಾರ್ಯನಿರ್ವಹಿಸುವುದಿಲ್ಲ ಎಂಬ ವದಂತಿಗಳನ್ನು ಹರಡಲು ಪ್ರಯತ್ನಿಸುತ್ತಿದೆ ಎಂದು ಟೀಕಿಸಿದರು.
ಚುನಾವಣೆಯಲ್ಲಿ ಬಿಜೆಪಿಯ ಸಾಧನೆ ಅಷ್ಟೊಂದು ಚೆನ್ನಾಗಿಲ್ಲ ಎಂದು ಬಿಂಬಿಸಲು ಯತ್ನಿಸುತ್ತಿದ್ದಾರೆ. ಕ್ರಿನರೇಂದ್ರ ಮೋದಿ ಅವರ ಭಾಷಣಗಳನ್ನು ಕಟು ವಿಮರ್ಶೆಗೆ ಒಳಪಡಿಸಲಾಗುತ್ತಿದೆ ಎಂದು ತಮ್ಮ ವರದಿಯಲ್ಲಿ ಕ್ರಿಸ್ಟೋಫರ್ ವುಡ್ ಹೇಳಿದ್ದಾರೆ.
‘ಚುನಾವಣೆ ಇನ್ನೂ ನಡೆಯುತ್ತಿದೆ. ಮೂರನೇ ಎರಡರಷ್ಟು ಕ್ಷೇತ್ರಗಳಿಗೆ ಮತದಾನವಾಗಿದೆ. ಒಟ್ಟಾರೆ ಚಲಾವಣೆಯಾದ ಮತಗಳು 2019ರ ಮಟ್ಟಕ್ಕಿಂತ ಎರಡು ಪಾಯಿಂಟ್ ಕಡಿಮೆ ಇದೆ. ಇದರಿಂದಾಗಿ ಹಿಂದಿನ ಚುನಾವಣೆಗಿಂತ ಕಡಿಮೆ ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ ಎನ್ನುವಂತಹ ಆತಂಕಗಳು ಮನೆ ಮಾಡಿವೆ’ ಎಂದು ತಿಳಿಸಿದ್ದಾರೆ.