ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್‌ನ ಅಮೇಲಿ ಜಿಲ್ಲೆಯ ದಾಮ್ನಗರದ ನಗರಪಾಲಿಕೆಯ ಇಬ್ಬರು ಬಿಜೆಪಿ ಸದಸ್ಯರು 3ನೇ ಮಗು ಜನಿಸಿದ್ದಕ್ಕೆ ತಮ್ಮ ಸದಸ್ಯತ್ವ ಕಳೆದುಕೊಂಡಿದ್ದಾರೆ.
ಖೀಮಾ ಕಸೋಟಿಯಾ ಮತ್ತು ಬೋಖಾ ಅನರ್ಹ ಬಿಜೆಪಿ ಸದಸ್ಯರು. ಇವರು ಅನರ್ಹರಾದರು ಪಾಲಿಕೆ ಕಮಲದ ತೆಕ್ಕೆಯಲ್ಲೇ ಇರಲಿದೆ. ಅಂದರೆ ಬಹುಮತ ಬಿಜೆಪಿಗೆ ಇದೆ ಎಂದರ್ಥ.
2005-06ರಲ್ಲಿ ಆಗಿನ ಗುಜರಾತ್ ಮುಖ್ಯಮಂತ್ರಿ ಮೋದಿ 1963ರ ಮುಸ್ಸಿಪಲ್ ಕಾಯಿದೆ ತಿದ್ದುಪಡಿ ಮಾಡಿ, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ ಯಾವುದೇ ವ್ಯಕ್ತಿ ಪಂಚಾಯತ್, ಪುರಸಭೆ, ಮುನ್ಸಿಪಲ್,ಕಾರ್ಪೊರೇಶನ್ ಚುನಾಣೆಗಳಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಿದ್ದರು. ಇನ್ನೊಂದು ತಿದ್ದುಪಡಿ ತಂದು ಅಧಿಕಾರದಲ್ಲಿದ್ದಾಗ ಮೂರನೇ ಮಗು ಜನಿಸಿದರೆ ಇವರು ಅನರ್ಹರಾಗಲಿದ್ದಾರೆ ಎಂಬ ನಿಯಮ ಸೇರಿಸಿದ್ದರು.
ಇತ್ತೀಚೆಗೆ ವಜ್ರ ವ್ಯಾಪಾರಿಯೊಬ್ಬರು ಈ ಸದಸ್ಯರಿಗೆ ಮೂರನೇ ಮಗುವಾಗಿದೆ ಎಂದು ದೂರು ನೀಡಿದ್ದರು, ಈಗ ಇಬ್ಬರ ಮೂರನೇ ಮಗು ಜನಿಸಿದ ಮಹಿತಿ ಅಮೇಲಿ ಜಿಲ್ಲಾಧಿಕಾರಿಗೆ ದೊರಕಿದೆ. ಈಗ ಇಬ್ಬರನ್ನು ಅನರ್ಹ ಮಾಡಿ ಜಿಲ್ಲಾಧಿಕಾರಿ ಆದೇಶಿದ್ದಾರೆ. ಅವರು ತಾವು ಸ್ಪರ್ಧಿಸುವಾಗ ಎರಡು ಮಕ್ಕಳಿದ್ದವು ತಮ್ಮ ಆಯ್ಕೆಯ ನಂತರ ಮೂರನೇ ಮೂರನೇ ಮಗು ಆಗಿದೆ ಎಂದು ಹೇಳಿದರೂ, ಅವರ ವಾದವನ್ನು ನಿರ್ಲಕ್ಷಿಸಿದ ಅಧಿಕಾರಿ ನಿಯಮಾನುಸಾರ ಅನರ್ಹರಾಗುತ್ತಾರೆ ಎಂದು ಹೇಳಿ ಇಬ್ಬರ ಸದಸ್ಯತ್ವ ರದ್ದು ಮಾಡಿದ್ದಾರೆ.