ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಕೋಟ್ ಅಗ್ನಿ ದುರಂತದ ತನಿಖೆಗಾಗಿ ರಚಿಸಲಾದ ವಿಶೇಷ ತನಿಖಾ ತಂಡದ (ಎಸ್ಐಟಿ) ಮುಖ್ಯಸ್ಥರು ಭಾನುವಾರ ರಾಜ್ಕೋಟ್ ಅಗ್ನಿ ದುರಂತ ಪ್ರಕರಣದ ವಿವರವಾದ ತನಿಖೆಯನ್ನು ನಡೆಸಲಾಗುವುದು ಎಂದು ಹೇಳಿದ್ದಾರೆ.
ಗುಜರಾತ್ನ ರಾಜ್ಕೋಟ್ ನಗರದ ಗೇಮಿಂಗ್ ಝೋನ್ನಲ್ಲಿ ಮೇ 25 ರಂದು ಸಂಜೆ ಭಾರಿ ಬೆಂಕಿ ಕಾಣಿಸಿಕೊಂಡು ಮಕ್ಕಳು ಸೇರಿದಂತೆ 27 ಮಂದಿ ಸಾವನ್ನಪ್ಪಿದ್ದರು.
“ಇದೊಂದು ದುರದೃಷ್ಟಕರ ಘಟನೆ… ಈ ಬಗ್ಗೆ ತನಿಖೆಗಾಗಿ ಎಸ್ಐಟಿ ತಂಡ ರಚಿಸಲಾಗಿದೆ…ಯಾವ ಇಲಾಖೆ ಏನು ಮಾಡಿದೆ, ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುವುದು. ಇದಕ್ಕೆ ಯಾರು ಹೊಣೆ ಮತ್ತು ಎಲ್ಲಿ ತಪ್ಪುಗಳಾಗಿವೆ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ತಡೆಯಲು ಏನು ಮಾಡಬೇಕು, ಈ ಎಲ್ಲಾ ವಿಷಯಗಳ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ಎಸ್ಐಟಿ ಮುಖ್ಯಸ್ಥ ಸುಭಾಷ್ ತ್ರಿವೇದಿ ಹೇಳಿದ್ದಾರೆ.