ಹೊಸದಿಗಂತ ವರದಿ, ಮಂಗಳೂರು:
ಸಮುದ್ರದಲ್ಲಿ ಮಾಲಿನ್ಯ ಹೆಚ್ಚುತ್ತಿದ್ದು, ಮೈಕ್ರೋ ಪ್ಲಾಸ್ಟಿಕ್‌ನಿಂದ ಸಾಕಷ್ಟು ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಡಾ.ರಘು ಮುರ್ತುಗುಡ್ಡೆ ಹೇಳಿದ್ದಾರೆ.
ಮಂಗಳೂರು ಲಿಟ್ ಫೆಸ್ಟ್‌ನಲ್ಲಿ ಶನಿವಾರ ‘ನೇತ್ರಾವತಿ ಟು ನೈಲ್ – ಲೋಕಲ್ ರಿವರ್ಸ್, ಗ್ಲೋಬಲ್ ಸ್ಟೇಕ್ಸ್ ಎಂಬ ವಿಷಯದ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಡಗುಗಳಿಂದಲೂ ಸಾಕಷ್ಟು ತ್ಯಾಜ್ಯ ಸಮುದ್ರ ಸೇರುತ್ತಿದೆ. ಇದರಿಂದ ಸಮುದ್ರದಲ್ಲಿ ಮಾಲಿನ್ಯ ಹೆಚ್ಚಾಗುತ್ತಿದೆ. ಇದರಿಂದ ಸಮುದ್ರದ ಜೀವಿಗಳಿಗೆ ಭಾರೀ ಸಮಸ್ಯೆ ಎದುರಾಗುತ್ತಿದೆ. ಅದರಲ್ಲೂ ಮೈಕ್ರೋ ಪ್ಲಾಸ್ಟಿಕ್‌ನಿಂದ ಹಲವು ಸಮಸ್ಯೆಗಳು ಎದುರಾಗುತ್ತಿದ್ದು, ಮೀನುಗಳಿಂದ ಮನುಷ್ಯರಿಗೂ ಸಮಸ್ಯೆಯಾಗುತ್ತಿದೆ. ತೊಂದರೆ ಯಾಗುತ್ತಿದೆ. ಆದ್ದರಿಂದ ಮೈಕ್ರೋ ಪ್ಲಾಸ್ಟಿಕ್‌ಗಳ ನಿಷೇಧದ ಅಗತ್ಯವಿದೆ ಎಂದರು.
ಕಮಡೋರ್ ಉದಯ್ ರಾವ್ ಮಾತನಾಡಿ, ನೇತ್ರಾವತಿ ಮತ್ತು ನೈಲ್ ನದಿಗಳ ನಡುವೆ ಸಾವಿರಾರು ಕಿಲೋಮೀಟರ್‌ಗಳ ಅಂತರವಿದ್ದರೂ, ಹಲವು ಶತಮಾನಗಳ ಹಿಂದೆ ಭಾರತ ಮತ್ತು ಈಜಿಪ್ಟ್ ದೇಶಗಳ ನಡುವೆ ವ್ಯಾಪಾರ ನಡೆಯುತ್ತಿತ್ತು. ಭಾರತದಿಂದ ಈಜಿಪ್ಟ್‌ಗೆ ಮಸ್ಲಿನ್ ಬಟ್ಟೆ ರಫ್ತು ಮಾಡಲಾಗುತ್ತಿತ್ತು ಎಂದು ಅವರು ಹೇಳಿದರು.
ಈ ಸಂವಾದವನ್ನು ಪ್ರಶಾಂತ್ ವೈದ್ಯರಾಜ್ ನಡೆಸಿಕೊಟ್ಟರು. ಸಿ.ಎ. ಗಿರಿಧರ್ ಕಾಮತ್ ಭಾಗವಹಿಸಿದ್ದರು.

