ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಮ್ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ವಿಚ್ಛೇದನ ವದಂತಿ ಎಲ್ಲೆಡೆ ಹರಿದಾಡುತ್ತಿದೆ. ಇದರ ನಡುವೆ ಈ ಸುದ್ದಿಗೆ ಪುಷ್ಠೀ ನಿಡುವಂತೆ ದಿಶಾ ಪಟಾನಿಯ ಆಪ್ತ ಸ್ನೇಹಿತ ಅಲೆಕ್ಸಾಂಡರ್ ಅಲೆಕ್ಸ್ ಜೊತೆ ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ ಕಾಣಿಸಿಕೊಂಡಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಇದೀಗ ಇವರಿಬ್ಬರ ನಡುವಿನ ಗೆಳೆತನ ಪಾಂಡ್ಯ ಜೊತೆಗೆ ಡಿವೋರ್ಸ್ಗೆ ಕಾರಣವಾಗಿರಬಹುದು ಎಂದು ಸಾಕಷ್ಟು ಊಹಾಪೋಹಗಳು ಕೇಳಿಬರುತ್ತಿದೆ.
ಪ್ರತೀ ಮ್ಯಾಚ್ ಸಮಯದಲ್ಲಿ ಕಾಣಿಸಿಕೊಳ್ಳುತ್ತಿದ್ದ ನತಾಶಾ, ಈ ಬಾರಿ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ಪಾಂಡ್ಯ ಪಾದಾರ್ಪಣೆ ಮಾಡಿದರೂ, ನತಾಶಾ ಮಾತ್ರ ಕಾಣಿಸಿಕೊಂಡಿರಲಿಲ್ಲ. ಅಲ್ಲದೆ ಯಾವುದೇ ಪಂದ್ಯವನ್ನು ವೀಕ್ಷಿಸಲು ಅವರು ಆಗಮಿಸಿರಲಿಲ್ಲ. ಇದೀಗ ಮತ್ತೊಬ್ಬನೊಂದಿಗೆ ಕಾಣಿಸಿಕೊಂಡಿದ್ದು, ಈ ಎಲ್ಲಾ ಕಾರಣಗಳಿಂದಾಗಿ ಇದೀಗ ಇಬ್ಬರು ಡೈವೋರ್ಸ್ ಆಗಲಿದ್ದಾರೆ ಎಂದು ವದಂತಿಗಳು ಹರಿದಾಡುತ್ತಿದೆ.
ಡಿವೋರ್ಸ್ ಗಾಸಿಪ್ ಎಲ್ಲೆಡೆ ಹರಿದಾಡುತ್ತಿದ್ದರೂ ಕೂಡ ಈ ವಿಷಯದ ಬಗ್ಗೆ ಹಾರ್ದಿಕ್ ಪಾಂಡ್ಯ ಹಾಗೂ ಪತ್ನಿ ನತಾಶಾ ಈವರೆಗೆ ಎಲ್ಲಿಯೂ ಕೂಡ ಏನನ್ನೂ ಹೇಳಿಕೊಂಡಿಲ್ಲ.