ಶಾರುಖ್‌ ಧರ್ಮಕ್ಕೆ ಗೌರವ ನೀಡುವೆ, ಇದರರ್ಥ ನಾನು ಮತಾಂತರಗೊಂಡಿದ್ದೇನೆ ಎಂದಲ್ಲ: ಗೌರಿ ಖಾನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಬಾಲಿವುಡ್ ಬಾದ್ ಷಾ ಶಾರುಖ್ ಖಾನ್, ಗೌರಿ ಖಾನ್ ಅವರ ಧರ್ಮ ಬೇರೆಬೇರೆಯಾದರೂ ಇದು ಅವರಿಬ್ಬರ ನಡುವಿನ ಪ್ರೀತಿಗೆ ಅಡ್ಡಿಯಾಗಲಿಲ್ಲ. ಮದುವೆಯ ಮೊದಲು ಕೆಲವು ತೊಂದರೆಗಳು ಎದುರಾದರೂ ಮದುವೆಯ ಬಳಿಕ ದಂಪತಿ ಎಂದರೆ ಹೀಗಿರಬೇಕು ಎನ್ನುವಷ್ಟು ಇವರಿಬ್ಬರೂ ಮಾದರಿಯಾಗಿದ್ದಾರೆ.

ಕಿಂಗ್ ಖಾನ್ ಮೊದಲಿನಿಂದಲೂ ತನ್ನ ರಾಣಿಗೆ ಆದರ್ಶ ಪತಿ. ಶಾರುಖ್ ಖಾನ್ ಮುಸ್ಲಿಂ ಆಗಿರುವುದರಿಂದ ಮದುವೆಯಾದ ಬಳಿಕ ಗೌರಿ ಮುಸ್ಲಿಂ ಆಗಿ ಮತಾಂತರವಾಗುತ್ತಾರೆ ಎನ್ನುವ ಹೇಳಿಕೆಗಳು ಜೋರಾಗಿ ಕೇಳಿ ಬಂದಿತ್ತು. ಹೀಗಾಗಿ ಅವರಿಗೂ ಪದೇಪದೇ ತಾವು ಮುಸ್ಲಿಂ ಆಗಿ ಮತಾಂತರಗೊಳ್ಳುವುದಿಲ್ಲ ಎಂದು ಹೇಳಬೇಕಾದ ಸಂದರ್ಭಗಳು ಎದುರಾಗಿತ್ತು.

ಇತ್ತೀಚೆಗೆ ಕರಣ್ ಜೋಹರ್ ಅವರ ಕಾರ್ಯಕ್ರಮ ಕಾಫಿ ವಿತ್ ಕರಣ್‌ನಲ್ಲಿಹೃತಿಕ್ ರೋಷನ್ ಅವರ ಪತ್ನಿ ಸುಸ್ಸಾನ್ನೆ ಖಾನ್ ಅವರೊಂದಿಗೆ ಗೌರಿ ಆಗಮಿಸಿದ್ದರು. ಅಲ್ಲಿ ಗೌರಿ ಮುಸ್ಲಿಂ ಆಗಿ ಮತಾಂತರಗೊಳ್ಳದಿರುವ ಕುರಿತು ಚರ್ಚೆ ನಡೆದಿತ್ತು.

ಶಾರುಖ್ ಖಾನ್ ಅವರ ಧರ್ಮಕ್ಕೆ ನಾನು ಮತಾಂತರವಾಗುವುದಿಲ್ಲ ಎಂದು ಗೌರಿ ಖಾನ್ ಹೇಳಿರುವ ಹಳೆಯ ವಿಡಿಯೋ ಈಗ ಮತ್ತೆ ಸದ್ದು ಮಾಡಿದೆ. ಇದರಲ್ಲಿ ಅವರು ತಾವು ಇಸ್ಲಾಂ ಧರ್ಮಕ್ಕೆ ಮತಾಂತರವಾಗದೇ ಉಳಿಯಲು ಕಾರಣವನ್ನೂ ಕೊಟ್ಟಿದ್ದಾರೆ.

ನಮ್ಮಿಬ್ಬರ ಮಧ್ಯೆ ಸಮತೋಲನವಿದೆ. ನಾನು ಶಾರುಖ್ ಅವರ ಧರ್ಮವನ್ನು ಗೌರವಿಸುತ್ತೇನೆ. ಮತ್ತು ಅವರೂ ನನ್ನ ಧರ್ಮವನ್ನು ಗೌರವಿಸುತ್ತಾರೆ. ಹೀಗಾಗಿ ನಾನು ಮತಾಂತರಗೊಂಡು ಮುಸ್ಲಿಂ ಆಗಬೇಕು ಈ ಎನ್ನುವುದರಲ್ಲಿ ಅರ್ಥವಿಲ್ಲ. ಪರಸ್ಪರ ಜೊತೆಯಾಗಿ ಬಾಳಲು ಅದು ಅನಿವಾರ್ಯ ಎಂಬುದನ್ನು ನಾನು ನಂಬುವುದಿಲ್ಲ. ಪ್ರತಿಯೊಬ್ಬರೂ ವೈಯಕ್ತಿಕ ಮತ್ತು ಅವರ ಧರ್ಮವನ್ನು ಅನುಸರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಶಾರುಖ್‌ನಂತೆ ನನ್ನ ಧರ್ಮವನ್ನು ಯಾವತ್ತೂ ಅಗೌರವಗೊಳಿಸುವುದಿಲ್ಲ. ಮಗ ಆರ್ಯನ್ ತನ್ನ ತಂದೆಯ ಧರ್ಮವನ್ನು ಅನುಸರಿಸುತ್ತಾನೆ. ಆರ್ಯನ್ ಗೆ ಶಾರುಖ್‌ ಎಂದರೆ ತುಂಬಾ ಇಷ್ಟ. ಹೀಗಾಗಿ ಆತ ಅವರ ಧರ್ಮವನ್ನು ಅನುಸರಿಸುತ್ತಾನೆ ಎಂದು ನಾನು ಭಾವಿಸುತ್ತೇನೆ. ನಾನು ಮುಸ್ಲಿಂ ಎಂದು ಅವರಿಬ್ಬರು ಯಾವಾಗಲೂ ಹೇಳುತ್ತಿರುತ್ತಾರೆ. ಅದನ್ನು ನಾನು ಸಕಾರಾತ್ಮಕವಾಗಿ ಸ್ವೀಕರಿಸಿದ್ದೇನೆ ಎಂದು ಗೌರಿ ಖಾನ್ ಹೇಳಿದ್ದಾರೆ .

ಶಾರುಖ್ ಖಾನ್ ಹಾಗೂ ಗೌರಿ ಖಾನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು 33 ವರ್ಷಗಳಾಗಿವೆ. ಬಾಲಿವುಡ್‌ನ ಈ ಸುವರ್ಣ ದಂಪತಿಗೆ ಆರ್ಯನ್ ಖಾನ್, ಸುಹಾನಾ ಖಾನ್ ಮತ್ತು ಅಬ್ರಾಮ್ ಖಾನ್ ಎಂಬ ಮೂರು ಮಕ್ಕಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!