ಹೊಸದಿಗಂತ ಡಿಜಿಟಲ್ ಡೆಸ್ಕ್:
ತನ್ನದೇ ಸರ್ಕಾರ ನಿರ್ಮಿಸಿರುವ ಕಳಪೆ ರಸ್ತೆ ಕಾಮಗಾರಿಗಳ ವಿರುದ್ಧ ಶಹಜಹಾನ್ಪುರದ ಬಿಜೆಪಿಯ ಶಾಸಕ ಛೇತ್ರಂ ಕಿಡಿಕಾರಿದ್ದಾರೆ.
32 ಕೋಟಿ ರೂ ವೆಚ್ಚದಲ್ಲಿ ಪೊವಾಯನ್ ತೆಹಸಿಲ್ ಹಾಗೂ ಲಖಿಂಪುರ ಜಿಲ್ಲೆಗೆ ಸಂಪರ್ಕ ಕಲ್ಪಿಸುವ 17 ಕಿ.ಮೀ ಉದ್ದ ರಸ್ತೆ ಕಾಮಗಾರಿಯನ್ನು ಮಾಡಲಾಗುತ್ತಿದೆ. ಶಾಸಕರು ಸ್ಥಳಕ್ಕೆ ಭೇಟಿ ನೀಡಿದಾಗ ಜಲ್ಲಿಕಲ್ಲು ಬದಲಾಗಿ ಮಣ್ಣನ್ನು ಬಳಸುವುದು ಕಂಡುಬಂದಿದೆ.ಪೆನ್‌ನಿಂದ ರಸ್ತೆಯನ್ನು ಅಗೆದು ಕಳಪೆ ಕಾಮಗಾರಿಯನ್ನು ತೋರಿಸಿದ್ದಾರೆ.
ಕಿರಿಯ ಇಂಜಿನಿಯರ್ ಮತ್ತು ಗುತ್ತಿಗೆದಾರರ ವಿರುದ್ಧ ಅಸಮಾಧಾನ ಹೊರಕಾಕಿದ ಶಾಸಕರು, ರಸ್ತೆಯ ಗುಣಮಟ್ಟದೊಂದಿಗೆ ಆಟವಾಡಿದರೆ ಜೈಲಿಗೆ ಕಳುಹಿಸುವುದಾಗಿ ಹೇಳಿದ್ದಾರೆ. ರಸ್ತೆ ಕಾಮಗಾರಿ ಗುಣಮಟ್ಟದಲ್ಲಿ ಯೋಗಿ ಆದಿತ್ಯನಾಥ್ ಸರಕಾರವು ಯಾವುದೇ ಜವಾಬ್ದಾರಿ ಹೊತ್ತಿಲ್ಲ, ಇಲಾಖೆ ಅಧಿಕಾರಿಗಳು ಕಮಿಷನ್ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.