ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಮಂಡಳಿ, ಸಿಬ್ಬಂದಿ ಕಚೇರಿಯನ್ನು ಸ್ಫೋಟಿಸುವುದಾಗಿ ಶೌಚಾಲಯದ ಕನ್ನಡಿ ಮೇಲೆ ಬೆದರಿಕೆ ಸಂದೇಶ ಬರೆಯಲಾಗಿದೆ.
ಈ ವಿಚಾರ ತಿಳಿಯುತ್ತಿದ್ದಂತೆ ಕೂಡಲೆ ಶ್ವಾನದಳ ಹಾಗೂ ಸಿಐಎಸ್ಎಫ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಹುಸಿ ಬಾಂಬ್ ಬೆದರಿಕೆ ಎಂದು ತಿಳಿದುಬಂದಿದೆ.
ವಿಮಾನ ನಿಲ್ದಾಣದ ಆಲ್ಪಾ 3 ಬಿಲ್ಡಿಂಗ್ನಲ್ಲಿನ ಶೌಚಾಲಯದ ಕನ್ನಡಿ ಮೇಲೆ 25 ನಿಮಿಷದಲ್ಲಿ ಕಟ್ಟಡಗಳು ಸ್ಟೋಟವಾಗುವುದಾಗಿ ಬೆದರಿಕೆ ಸಂದೇಶ ಬರೆಯಲಾಗಿತ್ತು. ಬೆಳಗ್ಗೆ ಶೌಚಾಲಯಕ್ಕೆ ಸಿಬ್ಬಂದಿ ತೆರಳಿದ ವೇಳೆ ಬರಹವನ್ನು ನೋಡಿದ್ದಾರೆ. ಕೂಡಲೆ ಈ ವಿಚಾರವನ್ನು ಭದ್ರತಾ ಪಡೆಗೆ ತಿಳಿಸಿದ್ದಾರೆ.ಪರಿಶೀಲನೆ ನಂತರ ಯಾವುದೇ ಬಾಂಬ್ ಇಲ್ಲದ ವಿಚಾರ ತಿಳಿದುಬಂದಿದೆ. ಇತ್ತೀಚೆಗೆ ಸಾಕಷ್ಟು ಹುಸಿ ಬಾಂಬ್ ಬೆದರಿಕೆ ಕರೆಗಳು ಬರುತ್ತಿವೆ.