ಬಲೂನ್ ಗಳಲ್ಲಿ ಟಾಯ್ಲೆಟ್ ಪೇಪರ್, ಕಸ ಕಟ್ಟಿ ದಕ್ಷಿಣ ಕೊರಿಯಾದತ್ತ ಹಾರಿಸಿದ ಉತ್ತರ ಕೊರಿಯಾ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಕಿರುಕುಳ ನೀಡುವ ಉದ್ದೇಶದಿಂದ ಉತ್ತರ ಕೊರಿಯಾ , ದಕ್ಷಿಣ ಕೊರಿಯಾದ‌ 8 ಪ್ರಾಂತ್ಯಗಳ ಮೇಲೆ ಸುಮಾರು 260 ಬಲೂನ್‌ಗಳು ಹರಿಸಿದೆ. ಈ ಬಲೂನ್‌ಗಳು ಸಂಪೂರ್ಣವಾಗಿ ಕೊಳಕಿನಿಂದ ತುಂಬಿವೆ.

ರಾಜಧಾನಿ ಸಿಯೋಲ್ ಮತ್ತು ದೇಶದ ಆಗ್ನೇಯ ಪ್ರಾಂತ್ಯದ ಜಿಯೊಂಗ್‌ಸಾಂಗ್‌ನಲ್ಲಿಯೂ ಬಲೂನ್‌ಗಳು ಬಿದ್ದಿವೆ. ಆದ್ದರಿಂದ ದಕ್ಷಿಣ ಕೊರಿಯಾದ ಅಧಿಕಾರಿಗಳು ಮನೆಯೊಳಗೆ ಇರುವಂತೆ ಜನರಿಗೆ ಸಲಹೆ ನೀಡಿದ್ದಾರೆ. ಅಲ್ಲದೇ ಬಲೂನ್‌ಗಳ ಹತ್ತಿರ ಹೋಗಬೇಡಿ ಹಾಗೂ ಅವುಗಳನ್ನು ಮುಟ್ಟಬೇಡಿ ಎಂಬುದಾಗಿ ಸೂಚನೆ ನೀಡಿದ್ದಾರೆ.

ಬಲೂನ್‌ಗಳೊಂದಿಗೆ ಬಂದಿರುವ ಕಸದಲ್ಲಿ ಪ್ಲಾಸ್ಟಿಕ್ ಬಾಟ್ಲಿಗಳು, ಹಾಳಾದ ಶೂಗಳ ಭಾಗಗಳು ಮತ್ತು ಮಣ್ಣು ಸೇರಿವೆ ಎಂದು ದಕ್ಷಿಣ ಕೊರಿಯಾದ ಮಿಲಿಟರಿಯ ಜಂಟಿ ಮುಖ್ಯಸ್ಥರು ತಿಳಿಸಿದ್ದಾರೆ. ಸೇನೆಯು ಪ್ರಸ್ತುತ ಈ ಬಲೂನ್‌ಗಳ ಬಗ್ಗೆ ತನಿಖೆ ನಡೆಸುತ್ತಿದೆ. ಉತ್ತರ ಕೊರಿಯಾದ ಈ ಕ್ರಮದಿಂದ ಅಂತಾರಾಷ್ಟ್ರೀಯ ಕಾನೂನುಗಳ ಉಲ್ಲಂಘನೆಯಾಗಿದೆ. ಇದೊಂದು ಬೆದರಿಕೆಯಾಗಿದ್ದು, ಇಂತಹ ಅಮಾನವೀಯ ಕ್ರಮಗಳನ್ನು ಕೂಡಲೇ ನಿಲ್ಲಿಸುವಂತೆ ದಕ್ಷಿಣ ಕೊರಿಯಾದ ಸೇನೆಯು ಉತ್ತರ ಕೊರಿಯಾಕ್ಕೆ ಎಚ್ಚರಿಕೆ ನೀಡಿದೆ.

https://x.com/20gimsack/status/1795726961907511506?ref_src=twsrc%5Etfw%7Ctwcamp%5Etweetembed%7Ctwterm%5E1795726961907511506%7Ctwgr%5E972c1cdc5d16f212fb4361d531e7eda50afa0f59%7Ctwcon%5Es1_&ref_url=https%3A%2F%2Fpublictv.in%2Fnorth-korea-sends-massive-balloons-filled-with-garbage-to-south-korea%2F

ಬಲೂನ್‌ಗಳನ್ನು ಕಂಡ ದಕ್ಷಿಣ ಕೊರಿಯಾದ ಜನರು ಅದರ ವೀಡಿಯೋ ಹಾಗೂ ಫೋಟೋಗಳನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಸ್ಥಳೀಯ ಜನರ ಪ್ರಕಾರ, ಬಲೂನ್‌ಗಳನ್ನು ಊದಿ ನಂತ್ರ ದಾರದಿಂದ ಏನೋ ಕಟ್ಟಲಾಗಿತ್ತು. ಅದರಲ್ಲಿ ಟಾಯ್ಲೆಟ್ ಪೇಪರ್, ಬ್ಯಾಟರಿ, ಕಸ ಮತ್ತಿತರ ವಸ್ತುಗಳು ಪತ್ತೆಯಾಗಿವೆ. ಇಂತಹ ವಸ್ತುಗಳು ಕಂಡುಬಂದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವಂತೆ ನಾಗರಿಕರಿಗೆ ತಿಳಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!