ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೆರೂರು ಗ್ರಾಮದಲ್ಲಿ ನಡೆದ ಜಾತ್ರೆಯಲ್ಲಿ ಪ್ರಸಾದ ಸೇವಿಸಿ 50 ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ.
30 ಜನರನ್ನು ಸರ್ಕಾರಿ ಆಸ್ಪತ್ರೆಯಲ್ಲಿ, 10 ಜನರನ್ನು ಕೆರೂರಿನ ಅಂಗವಾಡಿಯಲ್ಲಿ ಹಾಗೂ 10 ಜನರನ್ನು ಯಕ್ಸಂಬಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆ ಹಿನ್ನಲೆ ವೈದ್ಯಕೀಯ ತಂಡ ಗ್ರಾಮದಲ್ಲೇ ಬಿಡು ಬಿಟ್ಟಿದೆ.
ನಿನ್ನೆ ಮಧ್ಯಾಹ್ನ ಮಾಡಿ ಉಳಿದಿದ್ದ ಅಡುಗೆಯನ್ನು ಸಂಜೆ ವೇಳೆಗೆ ಪ್ರಸಾದದಂತೆ ಇನ್ನೂರಕ್ಕೂ ಹೆಚ್ಚು ಮಂದಿ ಸೇವಿಸಿದ್ದಾರೆ. ಊಟ ಸೇವಿಸಿದವರಲ್ಲಿ ವಾಂತಿ, ಬೇಧಿ ಹಾಗೂ ಹೊಟ್ಟೆ ನೋವು ಕಾಣಿಸಿದೆ. ಸದ್ಯ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ.