ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಾಖಲೆಯ 52.9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿರುವಎರಡು ದಿನಗಳ ನಂತರ ಮಹಾರಾಷ್ಟ್ರದ ನಾಗ್ಪುರದಲ್ಲಿ ತಾಪಮಾನ 50 ಡಿಗ್ರಿ ಸೆಲ್ಸಿಯಸ್ ಮೀರಿದೆ.
ಇದು 56 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಇದು ಸಾರ್ವಕಾಲಿಕ ದಾಖಲೆಯಾಗಿದೆ. ನಾಗ್ಪುರದಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸ್ಥಾಪಿಸಿದ ನಾಲ್ಕು ಸ್ವಯಂಚಾಲಿತ ಹವಾಮಾನ ಕೇಂದ್ರಗಳಲ್ಲಿ (ಎಡಬ್ಲ್ಯುಎಸ್) ಎರಡರಲ್ಲಿ ಇದುವರೆಗಿನ ಗರಿಷ್ಠ ತಾಪಮಾನ ದಾಖಲಾಗಿದ್ದು 50 ಡಿಗ್ರಿ ಸೆಲ್ಸಿಯಸ್ ಮೀರಿದೆ.
ಮಹಾರಾಷ್ಟ್ರದ ಉತ್ತರ ಅಂಬಾಜಾರಿ ರಸ್ತೆಯ ರಾಮದಾಸ್ಪೇಟ್ನ ಪಿಡಿಕೆವಿಯಲ್ಲಿರುವ 24 ಹೆಕ್ಟೇರ್ ತೆರೆದ ಕೃಷಿ ಕ್ಷೇತ್ರದಲ್ಲಿರುವ ಹವಾಮಾನ ಕೇಂದ್ರದಲ್ಲಿ 56 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಸೋನೆಗಾಂವ್ನ ಪ್ರಾದೇಶಿಕ ಹವಾಮಾನ ಕೇಂದ್ರದಲ್ಲಿ 54 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಿಸಿದೆ. ವಾರ್ಧಾ ರಸ್ತೆಯ ಖಾಪ್ರಿಯಲ್ಲಿರುವ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಕಾಟನ್ ರಿಸರ್ಚ್ ಪ್ರದೇಶದ ಹೊಲಗಳಲ್ಲಿನ ಅಂಗನವಾಡಿ ಕೇಂದ್ರವು 44 ಡಿಗ್ರಿ ಸೆಲ್ಸಿಯಸ್ ಮತ್ತು ರಾಮ್ಟೆಕ್ ಎಡಬ್ಲ್ಯೂಎಸ್ 44 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡು ಬಂದಿದೆ.
ದೆಹಲಿಯ ಹೊರಗಿನ ಪ್ರದೇಶಗಳಲ್ಲಿನ ತನ್ನ ಮೂರು ಹವಾಮಾನ ಕೇಂದ್ರಗಳಲ್ಲಿ ಸುಮಾರು 50 ಡಿಗ್ರಿ ಸೆಲ್ಸಿಯಸ್ ತಲುಪಿದ ಒಂದು ದಿನದ ನಂತರ ತಾಪಮಾನದಲ್ಲಿ ದಿಢೀರ್ ಏರಿಕೆ ಕಂಡಿದೆ. ಹೀಗಾಗಿ ಮುಂಗೇಶ್ವರ ಅಂಕಿ ಅಂಶಗಳನ್ನು ಮರುಪರಿಶೀಲನೆ ಮಾಡಲು ಮುಂದಾಗಿದೆ. ಮುಂಗೇಶ್ಪುರ, ನರೇಲಾ ಮತ್ತು ನಜಾಫ್ಗಡ ಹವಾಮಾನ ಕಚೇರಿಗಳು ಇತ್ತೀಚೆಗೆ ತೀವ್ರ ತಾಪಮಾನ ವರದಿ ಮಾಡುತ್ತಿವೆ. ಈ ಹಿಂದೆ ರಾಜಸ್ಥಾನದ ಚುರುವಿನಲ್ಲಿ 50.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇದು ಗರಿಷ್ಠವಾಗಿತ್ತು.