ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಲೋಕಸಭೆಯ ಚುನಾವಣೆಯ ಅಂತಿಮ ಹಂತವಾಗಿದ್ದು, ಘಟಾನುಘಟಿ ನಾಯಕರ ಭವಿಷ್ಯ ಇಂದು ನಿರ್ಧಾರವಾಗಲಿದೆ.
ಪಂಜಾಬ್‌ನಲ್ಲಿ ಭಾರತದ ಮಾಜಿ ಕ್ರಿಕೆಟಿಗ ಮತ್ತು ಎಎಪಿ ರಾಜ್ಯಸಭಾ ಸಂಸದ ಹರ್ಭಜನ್ ಸಿಂಗ್ ಜಲಂಧರ್‌ನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಮತ ಚಲಾಯಿಸಿದ ನಂತರ ಮಾತನಾಡಿ, ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಲು ಬರುತ್ತಾರೆ ಎಂದು ನಾನು ನಿರೀಕ್ಷಿಸುತ್ತೇನೆ ಮತ್ತು ನನಗೆ ಜಲಂಧರ್‌ನಲ್ಲಿ ಗರಿಷ್ಠ ಮತದಾನ ಆಗಬೇಕು.
ಇದು ನಮ್ಮ ಕರ್ತವ್ಯ ಮತ್ತು ನಾವು ಬಯಸಿದ ಸರ್ಕಾರವನ್ನು ನಾವು ತರಬೇಕು. ಜನರಿಗಾಗಿ ಕೆಲಸ ಮಾಡುವ ಸರ್ಕಾರ ನಾನು ವಿಐಪಿ ಅಲ್ಲ, ವಿಐಪಿ ಸಂಸ್ಕೃತಿ ಕೊನೆಗೊಳ್ಳಬೇಕು ಎಂದಿದ್ದಾರೆ.
#WATCH | Punjab: Former Indian cricketer and AAP Rajya Sabha MP Harbhajan Singh casts his vote at a polling booth in Jalandhar
#LokSabhaElections2024 pic.twitter.com/Ph55BxqFbp
— ANI (@ANI) June 1, 2024