ಜೂನ್ ತಿಂಗಳ ಮೊದಲ ದಿನವೇ ಗುಡ್ ನ್ಯೂಸ್: ಗ್ಯಾಸ್ ಸಿಲಿಂಡರ್ ದರ ಇಳಿಕೆ, ಈಗಿನ ದರ ಎಷ್ಟು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭೆ ಚುನಾವಣೆಯ ಅಂತಿಮ ದಿನದಂದು ಗ್ಯಾಸ್ ಬೆಲೆ ಇಳಿಕೆಯಾಗಿ ತಿಂಗಳ ಆರಂಭ ಶುಭ ಸುದ್ದಿ ತಂದಿದೆ. ತೈಲ ಮಾರುಕಟ್ಟೆ ಕಂಪನಿಗಳು ಜೂನ್ 1 ರಿಂದ 19 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 72 ರೂ. ಇಳಿಕೆ ಮಾಡಿದ್ದು, ಹೊಸ ಬೆಲೆಯನ್ನು 1,787 ರೂ.ಗೆ ಇಳಿಸಲಾಗಿದೆ. ಈ ಹೊಸ ಬೆಲೆ ಇಂದಿನಿಂದ ಅನ್ವಯವಾಗುತ್ತದೆ.

14.2 ಕೆಜಿ ಎಲ್‌ಪಿಜಿ ಸಿಲಿಂಡ‌ರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. 14.2 ಕೆಜಿ LPG ಸಿಲಿಂಡ‌ರ್ ಬೆಲೆ 829 ರೂ. ಆಗಿದೆ.

ಪ್ರತಿ ತಿಂಗಳ ಆರಂಭದಲ್ಲಿ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯನ್ನು ತೈಲ ಮಾರುಕಟ್ಟೆ ಏಜೆನ್ಸಿಗಳು ಪರಿಶೀಲಿಸುತ್ತವೆ ಮತ್ತು ದೇಶೀಯ ಮಾರುಕಟ್ಟೆಯಲ್ಲಿ LPG ಬೆಲೆ ಕಡಿಮೆಯಾಗುತ್ತದೆ ಅಥವಾ ಹೆಚ್ಚಾಗುತ್ತದೆ. ಆದರೆ ಗ್ಯಾಸ್ ಬೆಲೆ ಇಳಿಕೆಗೂ ಚುನಾವಣೆಗೂ ಯಾವುದೇ ಸಂಬಂಧವಿಲ್ಲ.

ವಾಣಿಜ್ಯ 19kg LPG ಸಿಲಿಂಡರ್‌ಗಳನ್ನು ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಮನೆಯಲ್ಲಿ 14.2 ಕೆಜಿ ಎಲ್‌ ಪಿಜಿ ಸಿಲಿಂಡರ್ ಅನ್ನು ಬಳಸಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!