ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಗತ್ತಿನ ಬೃಹತ್ ರಿಯಾಲಿಟಿ ಶೋಗಳಲ್ಲಿ ಒಂದಾದ ಬಿಗ್‌ಬಾಸ್ ಒಟಿಟಿ ಮತ್ತೆ ಆರಂಭವಾಗಲಿದೆ. ಹಿಂದಿಯಲ್ಲಿ ಇಷ್ಟು ವರ್ಷಗಳಿಂದಲೂ ಸಲ್ಮಾನ್ ಖಾನ್ ಕಾರ್ಯಕ್ರಮವನ್ನು ಹೋಸ್ಟ್ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಇದೀಗ ಸಲ್ಮಾನ್ ಜಾಗಕ್ಕೆ ಮತ್ತೊಬ್ಬ ನಟ ಎಂಟ್ರಿ ಆಗಿದ್ದಾರೆ.
ಇದೀಗ ಈ ಶೋ ಇಷ್ಟಪಡುವ ಪ್ರೇಕ್ಷಕರಿಗೆ ನಿರಾಸೆಯ ಸುದ್ದಿ ಸಿಕ್ಕಿದೆ. ಈ ಬಾರಿ ದೊಡ್ಮನೆ ಒಟಿಟಿ ಶೋಗೆ ಸಲ್ಮಾನ್ ಖಾನ್ ಬದಲು ನಿರೂಪಕನಾಗಿ ಅನಿಲ್ ಕಪೂರ್ ಎಂಟ್ರಿ ಕೊಟ್ಟಿದ್ದಾರೆ. ಸಲ್ಲು ಫ್ಯಾನ್ಸ್‌ಗೆ ಇದು ಕಹಿ ಸುದ್ದಿಯಾದ್ರೆ ಅನಿಲ್ ಕಪೂರ್ ಫ್ಯಾನ್ಸ್‌ಗೆ ಖುಷಿ ವಿಷಯವಾಗಿದೆ. ಅನಿಲ್ ಕಪೂರ್ ಹೇಗೇ ಆಂಕರಿಂಗ್ ಮಾಡಿದರೂ ಜನ ಸಲ್ಮಾನ್ ಖಾನ್‌ಗೆ ಕಂಪೇರ್ ಮಾಡೋದಂತೂ ಗ್ಯಾರೆಂಟಿ.