ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದೊಂದು ವಾರದಿಂದ ಬೆಂಗಳೂರಿನಲ್ಲಿ ಮಳೆಯೂ ಇಲ್ಲ, ಬಿಸಿಲೂ ಇಲ್ಲ ಎನ್ನುವಂಥ ವಾತಾವರಣ ಇತ್ತು. ಆದರೆ ಇದೀಗ ಸಣ್ಣಗೆ ತುಂತುರು ಮಳೆ ಆರಂಭವಾಗಿದೆ.
ಕಾರ್ಪೊರೇಷನ್, ಟೌನ್‌ಹಾಲ್, ಕೆ.ಆರ್.ಮಾರ್ಕೆಟ್ ಸೇರಿ ಹಲವೆಡೆ ತುಂತುರು ಮಳೆ ಶುರುವಾಗಿದ್ದು, ಬಿಸಿಲಿನಿಂದ ತತ್ತರಿಸಿದ್ದ ಸಿಲಿಕಾನ್ ಸಿಟಿ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ವೀಕೆಂಡ್ ಮೂಡ್ನಲ್ಲಿದ್ದ ಜನರಿಗೆ ಮಳೆ ನೋಡಿ ಖುಷಿಯಾಗಿದ್ದು, ಇನ್ನಷ್ಟು ಸುರಿಯಲಿ ಎಂದು ಅಭಿಪ್ರಾಯಪಟ್ಟಿದ್ದಾರೆ.