ಹೊಸದಿಗಂತ ಡಿಜಿಟಲ್ ಡೆಸ್ಕ್:
2024ನೇ ಸಾಲಿನ ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಕೃಷಿ ವಿಜ್ಞಾನ, ವೆಟರಿನರಿ, ಬಿ-ಫಾರ್ಮ್, ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ನಡೆಸಿದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ (KCET Result 2024) ಫಲಿತಾಂಶ ಪ್ರಕಟವಾಗಿದೆ.
ಅಭ್ಯರ್ಥಿಗಳು ಕೆಇಎ ವೆಬ್‌ಸೈಟ್‌ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಸಿಇಟಿ ಪರೀಕ್ಷೆಯನ್ನು (KCET Exam) ಏಪ್ರಿಲ್ 18, 19 ಹಾಗೂ 20ರಂದು ನಡೆಸಿತ್ತು. ಇದರಲ್ಲಿ ಸುಮಾರು 3.28 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ನೊಂದಾಯಿಸಿ ಕೊಂಡಿದ್ದರು. ಜೂನ್ ಮೊದಲ ವಾರದಲ್ಲಿ (KCET Result 2024) ಫಲಿತಾಂಶ ಪ್ರಕಟವಾಗಲಿದೆ ಎನ್ನಲಾಗಿತ್ತು. ಇದೀಗ ಅಧಿಕೃತವಾಗಿ ಕೆಇಎ ಫಲಿತಾಂಶ ಬಿಡುಗಡೆ ಮಾಡಿದೆ.
ರಿಸಲ್ಟ್ ಚೆಕ್ ಮಾಡುವ ವಿಧಾನ ಹೇಗೆ?
ರಿಸಲ್ಟ್ ಪ್ರಕಟವಾದ ಬಳಿಕ ಚೆಕ್ ಮಾಡುವ ವಿಧಾನದ ಹಂತ ಹಂತದ ಮಾಹಿತಿ ಇಲ್ಲಿದೆ. ಕರ್ನಾಟಕ ಎಕ್ಸಾಮಿನೇಷನ್ ಅಥಾರಿಟಿ ಅಫೀಶಿಯಲ್ ವೆಬ್‌ಸೈಟ್ https://cetonline.karnataka.gov.in/kea/ಗೆ ಭೇಟಿ ನೀಡಿ.
ಓಪನ್ ಆದ ಪುಟದ ಮೇಲ್ಭಾಗದಲ್ಲಿರುವ ʼಪ್ರವೇಶʼ ಆಯ್ಕೆಯನ್ನು ಕ್ಲಿಕ್ ಮಾಡಿ ಬಳಿಕ ʼಯುಜಿಸಿಇಟಿ 2024′ ಆಪ್ಶನ್ ಸೆಲೆಕ್ಟ್ ಮಾಡಿ.
ಇತ್ತೀಚಿನ ಪ್ರಕಟಣೆಗಳು ಎಂದಿರುವ ಕೆಳಗಡೆ ‘ಯುಜಿಸಿಇಟಿ 2024’ ಫಲಿತಾಂಶದ ಲಿಂಕ್ ನೀಡಲಾಗಿರುತ್ತದೆ. ಅದನ್ನು ಕ್ಲಿಕ್ ಮಾಡಿ.
ಈಗ ತೆರೆದುಕೊಳ್ಳುವ ಹೊಸ ಪುಟದಲ್ಲಿ ಅಭ್ಯರ್ಥಿಗಳು ತಮ್ಮ ರಿಜಿಸ್ಟರ್ ನಂಬರ್ ಮತ್ತು ಜನ್ಮ ದಿನಾಂಕ ಮಾಹಿತಿ ನೀಡಿ, ‘Submit’ ಬಟನ್ ಕ್ಲಿಕ್ ಮಾಡಿದರೆ ಫಲಿತಾಂಶ ಕಾಣಿಸುತ್ತದೆ. ಇದರ ಹೊರತಾಗಿಯೂ ವಿದ್ಯಾರ್ಥಿಗಳ ಫೋನ್ ನಂಬರ್‌ಗೆ ಫಲಿತಾಂಶದ ಮಸೇಜ್ ಬರಲಿದೆ.