ಮತ್ತೆ ಮೋದಿ ಪ್ರಧಾನಿ, 400 ಗಡಿ ದಾಟುವುದು ನಮ್ಮ ಅಜೆಂಡಾ: ಆರ್‌.ಅಶೋಕ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚುನಾವಣೋತ್ತರ ಸಮೀಕ್ಷೆ ನೋಡಿ ಖುಷಿ ಆಯಿತು. ನಮ್ಮದು ಎರಡು ಅಜೆಂಡಾ. ಒಂದು ಮತ್ತೆ ನರೇಂದ್ರ ಮೋದಿ, ಮತ್ತೊಂದು 400 ಗಡಿ ದಾಟುವುದು ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ (R.Ashok) ಹೇಳಿದ್ದಾರೆ.

ಚುನಾವಣೋತ್ತರ ಸಮೀಕ್ಷೆ (Exit Polls) ಕುರಿತು ಮಾತನಾಡಿದ ಅವರು, ನಮ್ಮದು ಎರಡು‌ ಅಜೆಂಡಾ. ಒಂದು ಮತ್ತೆ ನರೇಂದ್ರ ಮೋದಿ, ಮತ್ತೊಂದು 400 ದಾಟೋದು. ಒಂದಂತು ಆಗಿದೆ. ‌ಇನ್ನೊಂದು ರಿಯಲ್ ಪೋಲ್ ರಿಸಲ್ಟ್‌ನಲ್ಲಿ ರೀಚ್ ಆಗುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಂದಿನ ಎಕ್ಸಿಟ್ ಪೋಲ್ ರಿಸಲ್ಟ್‌ನಿಂದ ಕಾರ್ಯಕರ್ತರಲ್ಲೂ ಖುಷಿ‌ ಇರಲಿದೆ. ಕಳೆದ ವಿಧಾನಸಭೆ ಸೋತಿದ್ದೆವು. ಈ ರಿಸಲ್ಟ್ ಕರ್ನಾಟಕದ ಕಾರ್ಯಕರ್ತರಿಗೆ ಬೂಸ್ಟ್ ಕೊಡಲಿದೆ. ಅದೇ ರೀತಿ ಕಾಂಗ್ರೆಸ್ ಅವನತಿ‌ ಶತಸಿದ್ಧ ಎಂದು ತಿಳಿಸಿದ್ದಾರೆ.

ಕಳೆದ ಬಾರಿ ಕೆಲ ಸರ್ವೇಯಲ್ಲಿ 250 ಸ್ಥಾನ ಕೊಟ್ಟಿದ್ದರು. 272 ಬರಲ್ಲ ಅಂದಿದ್ದರು. ಆದರೆ 303 ಕ್ಕೆ ಹೋಗಿದ್ದೆವು. ಈ ಬಾರಿ 300 ಸ್ಥಾನ ಕೊಟ್ಟಿದ್ದಾರೆ. ನೋಡೋಣ, ಎನ್‌ಡಿಎ 400 ರೀಚ್ ಆಗೋದು ಸ್ಪಷ್ಟ ಅಭಿಪ್ರಾಯ ಇದೆ. ರಾಜ್ಯದಲ್ಲಿ ಕಾಂಗ್ರೆಸ್ 20 ಸ್ಥಾನ ಗೆಲ್ತೀವಿ ಅಂತ ಹೇಳಿದ್ರು. ಸಿದ್ದರಾಮಯ್ಯ ಅವರು 18-20 ಎಂದು ಹೇಳಿದ್ದರು. ಎಕ್ಸಿಟ್ ಪೋಲ್‌ನಲ್ಲಿ ಐದಾರು ಸ್ಥಾನ ಬರ್ತಾ ಇದೆ. ಕಾಂಗ್ರೆಸ್ ಭಾವನೆ ಫೇಲ್ಯುರ್ ಆಗಿದೆ. ಕಾಂಗ್ರೆಸ್‌ಗೆ ಇದೇ ರಿಸಲ್ಟ್ ಬಂದರೆ ಭಾರಿ ಹಿನ್ನಡೆ ಆಗಲಿದೆ ಎಂದು ಟಾಂಗ್‌ ಕೊಟ್ಟಿದ್ದಾರೆ.

ಚುನಾವಣೆಗೂ ಮುನ್ನವೇ ನಾವು 23-24 ಗೆಲ್ಲೋದಾಗಿ ಹೇಳಿದ್ದೆವು. ಸಮೀಕ್ಷೆ ಕೂಡ ಹತ್ತಿರ ಹೇಳುತ್ತಿದೆ. ಫಲಿತಾಂಶ ದಿನವು ಕಾಂಗ್ರೆಸ್‌ಗೆ ಇದೇ ರಿಸಲ್ಟ್ ಇರಲಿದೆ. ಹಾಸನ ಗೆಲ್ಲೋದಾಗಿ ಮಾಹಿತಿ ಇದೆ. ದಕ್ಷಿಣ ಭಾರತದಲ್ಲಿ ಈ ಬಾರಿ ಉತ್ತಮ ಪರ್ಫಾರ್ಮೆನ್ಸ್‌ ಇದೆ. ಆಂಧ್ರದಲ್ಲಿ ಕಾಂಗ್ರೆಸ್ 0, ನಾವು 18 ಗೆಲ್ಲೋದಾಗಿ ಮಾಹಿತಿ ಇದೆ. ತೆಲಂಗಾಣ ಕಳೆದ ಬಾರಿ 4, ಈ ಬಾರಿ ಎಂಟಕ್ಕೆ ಏರಿಕೆ ಆಗುತ್ತಿದೆ. ತಮಿಳುನಾಡು‌, ಕೇರಳ ಖಾತೆ ಓಪನ್ ಆಗುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಸ್ವಲ್ಪ ಕಡಿಮೆಯಾದರೂ ಒಟ್ಟಾರೆ ದಕ್ಷಿಣ ಭಾರತದಲ್ಲಿ ಉತ್ತಮ ರಿಸಲ್ಟ್ ಬರಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!