ಮೇಷ
ಕುಟಂಬಸ್ಥರ ಜತೆ ಹೆಚ್ಚು ಕಾಲ ಕಳೆಯುವಿರಿ. ಚಿಂತೆಗೆ ಕಾರಣವಾಗಿದ್ದ ಕೌಟುಂಬಿಕ ವಿಷಯವೊಂದು ಪರಿಹಾರ ಕಾಣುವುದು. ಮಾನಸಿಕ ನಿರಾಳತೆ.
ವೃಷಭ
ವಿರಾಮ ಪಡೆಯುವ ಮನಸ್ಸಿದ್ದರೂ ಅದು ಸಾಧ್ಯವಾಗದು. ಹಲವಾರು ಕೆಲಗಳ ಹೊಣೆಗಾರಿಕೆ. ಸುಲಭವಾಗಿ ಕಂಡ ವಿಷಯ ಕಠಿಣವಾಗಲಿದೆ.
ಮಿಥುನ
ಇಂದಿನ ನಿಮ್ಮ ಯೋಜನೆ ಕಾರ್ಯಗತಗೊಳ್ಳದು. ಇದರಿಂದ ಅಸಹನೆ. ಕೌಟುಂಬಿಕ ವಿಷಯ ದಲ್ಲಿ ಅಸಮಾಧಾನ ಹೆಚ್ಚಿಸುವ ಬೆಳವಣಿಗೆ. ಆಪ್ತ ಬಂಧು ಭೇಟಿ.
ಕಟಕ
ಇಂದು ಆಹಾರದ ವಿಚಾರದಲ್ಲಿ ಎಚ್ಚರ ವಹಿಸಿ. ಅಜೀರ್ಣದಂಥ ಸಮಸ್ಯೆ ಉಂಟಾದೀತು. ಸಣ್ಣ ವಾಗ್ವಾದ ವಿಕೋಪಕ್ಕೆ ಹೋಗದಂತೆ ನೋಡಿಕೊಳ್ಳಿ.
ಸಿಂಹ
ಹೆಚ್ಚು ಕ್ರಿಯಾಶೀಲ ದಿನ. ಜಡತ್ವ ಬಿಟ್ಟು ಚುರುಕಾಗಿರಿ. ನಿಮ್ಮ ಕ್ಷೇತ್ರದಲ್ಲಿ ಪ್ರತಿಸ್ಪರ್ಧೆ ಹೆಚ್ಚು. ಸ್ಪರ್ಧೆಯಲ್ಲಿ ಹಿಂದೆ ಬೀಳದಿರಿ. ಕೌಟುಂಬಿಕ ಸಮ್ಮಿಲನ.
ಕನ್ಯಾ
ಕಳೆಗುಂದಿದ ದಿನ. ಉತ್ಸಾಹರಾಹಿತ್ಯ. ಹತಾಶೆ, ಕೋಪ ಆವರಿಸಬಹುದು. ಯಾರ ಜತೆಗೂ ವಾಗ್ವಾದಕ್ಕೆ ಇಳಿಯದಿರಿ. ಆರ್ಥಿಕ ವ್ಯಯ.
ತುಲಾ
ನಿಮ್ಮ ಕಾರ್ಯದಲ್ಲಿ ಪ್ರತಿಕೂಲ ಸನ್ನಿವೇಶ ಎದುರಾದೀತು. ಅದನ್ನು ನಿಭಾಯಿಸುವಲ್ಲಿ ಕಠಿಣ ನಿಲುವು ತಳೆಯಲು ಸಿದ್ಧರಾಗಿರಿ. ಹಿಂಜರಿಕೆ ತೋರಬೇಕಾಗಿಲ್ಲ.
ವೃಶ್ಚಿಕ
ನೀವು ಮಾಡಬೇಕಿರುವ ಕೆಲಸದಲ್ಲಿ ಸವಾಲು ಹೆಚ್ಚು. ಇತರರಿಂದ ಟೀಕೆ ಕೇಳಿಬಂದೀತು. ಇದು ನಿಮ್ಮ ನಿರ್ವಹಣೆ ಮೇಲೆ ಪರಿಣಾಮ ಬೀರದಿರಲಿ. ಖರ್ಚು ಅಧಿಕ.
ಧನು
ನಿಮಗೆ ಪೂರಕವಾದ ಬೆಳವಣಿಗೆ. ಕೌಟುಂಬಿಕ ಪರಿಸರ ತಿಳಿಯಾಗಿ ಮನಸಿಗೆ ನೆಮ್ಮದಿ ಮೂಡುವುದು. ವಿರಸವನ್ನು ಸರಸದಿಂದ ನಿಭಾಯಿಸಿರಿ.
ಮಕರ
ಪ್ರತಿಕೂಲ ಪರಿಸ್ಥಿತಿ ಉಂಟಾದೀತು. ಎದುರಿಸಿ ಕಷ್ಟಕ್ಕೆ ಸಿಲುಕದಿರಿ. ಅದಕ್ಕೆ ಹೊಂದಿಕೊಂಡು ಹೋಗುವುದು ಮುಖ್ಯ. ತಾಳ್ಮೆಯಿರಲಿ.
ಕುಂಭ
ಭಾವನಾತ್ಮಕ ದೃಢತೆ ಪ್ರದರ್ಶಿಸಿ. ಸಣ್ಣ ಹಿನ್ನಡೆಗೆ ಅಂಜಿ ಕೂರದಿರಿ. ಕೆಲವರು ನಿಮ್ಮನ್ನು ದೂರ ಮಾಡಿದರೂ ಅವರಿಲ್ಲದೆ ಬದುಕಲು ಕಲಿಯಿರಿ.
ಮೀನ
ಕೆಲದಿನಗಳ ಒತ್ತಡ, ಉದ್ವಿಗ್ನತೆ ಇಂದು ನಿವಾರಣೆ. ಸಂತೋಷ ಆಚರಿಸುವ ಉದ್ದೇಶ ಹೊಂದಿದ್ದರೆ ಮುಂದುವರಿಯಿರಿ.