ನಾಳೆ ಮತಎಣಿಕೆ: ಹೇಗಿದೆ ರಾಜಧಾನಿ ಬೆಂಗಳೂರಿನಲ್ಲಿ ತಯಾರಿ??

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಲೋಕಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಾಳೆ ಬೆಳಗ್ಗೆ ಆರಂಭವಾಗಲಿದೆ, ಈ ಹಿನ್ನಲೆಯಲ್ಲಿ ರಾಜಧಾನಿ ಬೆಂಗಳೂರಿ ಸಕಲ ತಯಾರಿ ನಡೆದಿದೆ.

ಜೂನ್ 4 ರಂದು ಬೆಳಗ್ಗೆ 8 ಗಂಟೆಯಿಂದ ಮತಎಣಿಕೆ ಆರಂಭವಾಗಲಿದ್ದು, ಬಿಬಿಎಂಪಿ ಮುಖ್ಯ ಅಯುಕ್ತ ಹಾಗೂ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಸ್ಟ್ರಾಂಗ್ ರೂಂಗಳ ಪರಿಶೀಲನೆ ನಡೆಸಿದ್ದಾರೆ.

ಅಂಚೆಮತದಿಂದ ಆರಂಭ
ಜೂನ್ 4 ರಂದು ಬೆಳಗ್ಗೆ 7.45ಕ್ಕೆ ಸ್ಟ್ರಾಂಗ್ ರೂಂಗಳು ಓಪನ್ ಆಗಲಿದ್ದು, ಬೆಳಗ್ಗೆ 8 ಗಂಟೆಯಿಂದ ಮತಎಣಿಕೆ ಆರಂಭಿಸಲು ತಯಾರಿ ನಡೆಸಲಾಗಿದೆ. ಸದ್ಯ ಬೆಂಗಳೂರಿನ 3 ಸ್ಟ್ರಾಂಗ್ ರೂಂಗಳಲ್ಲಿ 9 ಕೊಠಡಿಗಳಲ್ಲಿನ ಪ್ರತಿ ಕೊಠಡಿಗೆ 14 ಟೇಬಲ್ ಗಳಲ್ಲಿ ಮತಎಣಿಕೆ ನಡೆಯಲಿದೆ. 8 ಗಂಟೆಯಿಂದ ಅಂಚೆಮತಗಳ ಎಣಿಕೆ ಶುರುವಾಗಲಿದ್ದು, ಬಳಿಕ ಇವಿಎಂ ಕೌಂಟಿಂಗ್ ಆರಂಭವಾಗಲಿದೆ.

ಸಿಸಿಟಿವಿ ಕಣ್ಣು
ಮತಎಣಿಕೆ ಕೇಂದ್ರಗಳಲ್ಲಿ ಸಿಸಿಟಿವಿಗಳ ಮೂಲಕ ನಿಗಾ ಇಡಲಿದ್ದು, ಮತಎಣಿಕೆ ಸಿಬ್ಬಂದಿಗೆ ಮೊಬೈಲ್ ,ಪರ್ಸ್ ನಿಷೇಧ ಹೇರಲಾಗಿದೆ. ಆನ್ ಕೂರ್ ಸಾಫ್ಟ್​ವೇರ್ ನಲ್ಲಿ ಪ್ರತಿ ರೌಂಡ್ ಮತಎಣಿಕೆ ಅಪ್ ಲೋಡ್ ಆಗಲಿದ್ದು, ಎಣಿಕೆಯಲ್ಲಿ ಸಮಸ್ಯೆಯಾಗದಂತೆ ನಿಗಾ ಇಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!