ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿ ಲೋಕಸಭೆ ಚುನಾವಣೆಯ ಫಲಿತಾಂಶದ ಟ್ರೆಂಡ್ ಬೇಗ ಪ್ರಕಟವಾದರೂ, ಅಧಿಕೃತ ಫಲಿತಾಂಶ ನಂತರ ಪ್ರಕಟವಾಗಲಿದೆ.
ಅಧಿಕೃತ ಫಲಿತಾಂಶ ವಿಳಂಬಕ್ಕೆ ಸುಪ್ರೀಂ ಕೋರ್ಟ್ ತೀರ್ಪು ಕಾರಣ. ಈ ಬಾರಿ ಪ್ರತಿ ವಿಧಾನಸಭಾ ಕ್ಷೇತ್ರದಿಂದ 5 ವಿವಿಪ್ಯಾಟ್ ಮತಗಳನ್ನು ಎಣಿಕೆ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಚುನಾವಣಾಧಿಕಾರಿಗಳು ಈ ಆದೇಶವನ್ನು ಅನುಸರಿಸಬೇಕಾಗಿರುವುದರಿಂದ, ಅಂಚೆ ಮತ್ತು ಇವಿಎಂ ಮತಗಳ ಎಣಿಕೆ ಮುಗಿದ ನಂತರ VVPAT ಮತಗಳನ್ನು ಎಣಿಕೆ ಮಾಡಲಾಗುತ್ತದೆ.
ಬೆಳಗ್ಗೆ 11 ಗಂಟೆಗೆ ಫಲಿತಾಂಶದ ಟ್ರೆಂಡ್ ಹೊರಬೀಳಲಿದ್ದು, ಸಂಜೆ ವೇಳೆಗೆ ಅಧಿಕೃತ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ. ಒಂದು ಲೋಕಸಭಾ ಕ್ಷೇತ್ರದಲ್ಲಿ 10 ಕ್ಷೇತ್ರಗಳಿದ್ದರೆ, 10 ಕ್ಷೇತ್ರಗಳ ಪೈಕಿ 5 ಮತ ಕೇಂದ್ರ ಅಂದರೆ ಒಟ್ಟು 50 ಮತ ಕೇಂದ್ರಗಳ ವಿವಿಪ್ಯಾಟ್ನಲ್ಲಿ ಬಿದ್ದ ಮತಗಳನ್ನು ಲೆಕ್ಕ ಹಾಕಬೇಕಾಗುತ್ತದೆ ಎಂದು ವರದಿಯಾಗಿದೆ.