ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನರಾಗಿ 4 ವರ್ಷಗಳು ಕಳೆದಿವೆ. ಇದಾದ ಬಳಿಕ ಅವರು ವಾಸಿಸುತಿದ್ದ ಮುಂಬೈ ಅಪಾರ್ಟ್ಮೆಂಟ್ ನತ್ತ ಯಾರು ಮುಖಮಾಡಲೇ ಇಲ್ಲ. ಈ ಕುರಿತುಸಾಕಷ್ಟು ನೆಗೆಟಿವ್ ವಿಚಾರಗಳು ಹಬ್ಬಿತ್ತು.
ಆದರೆ ಇದು ಯಾವುದಕ್ಕೂ ಕ್ಯಾರೆ ಎನ್ನದೇ ನಟಿ ಅದಾ ಶರ್ಮಾ ಸುಶಾಂತ್ ಮನೆಯಲ್ಲಿ ಖರೀದಿಸಿದ್ದರು. ಆದ್ರೂ ಆ ಮನೆಗೆ ಅವರು ಹೋಗಿರಲಿಲ್ಲ. ಆದ್ರೆ ಇದೀಗ ನಟನ ಮನೆಗೆ ಅದಾ ಶರ್ಮಾ (Adah Sharma) ಶಿಫ್ಟ್ ಆಗಿದ್ದಾರೆ. ನಟನ ಮನೆಯಲ್ಲಿ ವಾಸವಾಗಿರುವ ಅನುಭವವನನ್ನು ಬಿಚ್ಚಿಟ್ಟಿದ್ದಾರೆ.
ಸುಶಾಂತ್ ಮನೆಯನ್ನು ಖರೀದಿ ಮಾಡುವುದು ಬೇಡ ಎಂದು ಅನೇಕರು ಹೇಳಿದ್ರು.. ಯಾರ ಮಾತಿಗೂ ನಟಿ ಕಿವಿ ಕೊಡದೇ ಇತ್ತೀಚೆಗೆ ಶಿಫ್ಟ್ ಆಗಿದ್ದಾರೆ. ಸುಶಾಂತ್ ನಿಧನರಾದ ಈ ಮನೆಯಲ್ಲಿ ಭಯ ಆಗಬಹುದು ಎಂದು ಹಲವರು ಭಾವಿಸಿದ್ದರು. ಆದರೆ ಆ ರೀತಿ ಏನು ಆಗಲಿಲ್ಲ. ಈ ಮನೆಯಲ್ಲಿ ಪಾಸಿಟಿವ್ ವೈಬ್ ಅನುಭವ ಆಗಿದೆ ಎಂದು ಖುಷಿಯಿಂದ ಸಂದರ್ಶನದಲ್ಲಿ ನಟಿ ಮಾತನಾಡಿದ್ದಾರೆ.
ಸುಶಾಂತ್ ಮನೆಗೆ ಅದಾ ಶರ್ಮಾ ಹೊಸ ರೂಪ ಕೊಟ್ಟಿದ್ದಾರೆ. ಇದೀಗ ಸ್ಟೈಲ್‌ಗೆ ತಕ್ಕಂತೆ ಮನೆಗೆ ಹೊಸ ವಿನ್ಯಾಸ ಮಾಡಿಸಿದ್ದಾರೆ. ಮನೆಯ ಕೆಳಗಿನ ಫ್ಲೋರ್‌ನಲ್ಲಿ ದೇವಸ್ಥಾನ ಮತ್ತು ಡ್ಯಾನ್ಸ್ ರೂಮ್ ಸೇರಿದಂತೆ ಹಲವು ಬದಲಾವಣೆಗಳನ್ನು ಅವರ ಅಭಿರುಚಿಗೆ ತಕ್ಕಂತೆ ಮಾಡಿಸಿಕೊಂಡಿದ್ದಾರೆ.