Sunday, January 11, 2026

Relationship | ಅತ್ತ ಪ್ರೀತಿಯೂ ಅಲ್ಲ..ಇತ್ತ ಸ್ನೇಹವೂ ಅಲ್ಲ..ಮಧ್ಯದಲ್ಲೇ ತೇಲುತ್ತಿದೆ ಈ Situationship

ಇತ್ತೀಚಿನ ದಿನಗಳಲ್ಲಿ ಸಂಬಂಧಗಳ ಅರ್ಥವೇ ಬದಲಾಗುತ್ತಿದೆ. ಹೆಸರುಗಳು ಹೊಸದಾಗಿವೆ, ನಿಯಮಗಳು ಹಳೆಯದಾಗಿಲ್ಲ. ಒಪ್ಪಿಕೊಳ್ಳುವವರೂ ಇದ್ದಾರೆ, ಪ್ರಶ್ನಿಸುವವರೂ ಇದ್ದಾರೆ. ಏಕೆಂದರೆ ಇಂದಿನ ಸಂಬಂಧಗಳಲ್ಲಿ ಸ್ವಾತಂತ್ರ್ಯ ಎಷ್ಟಿದೆಯೋ, ಅಷ್ಟೇ ಅಪಾಯವೂ ಅಡಗಿದೆ. ಅಂಥದ್ದೇ ಹೊಸ ತಲೆಮಾರಿನ ಟ್ರೆಂಡ್‌ ಎಂದರೆ ಸಿಚುವೇಷನ್‌ಶಿಪ್. ಇದು ಪ್ರೀತಿಯೂ ಅಲ್ಲ, ಸ್ನೇಹವೂ ಅಲ್ಲ – ಇಬ್ಬರ ಮಧ್ಯೆ ಇರುವ ಗೊಂದಲದ ಗ್ರೇ ಎರಿಯಾ.

ಸಿಚುವೇಷನ್‌ಶಿಪ್ ಅಂದ್ರೇನು?

ಇದು ಬದ್ಧತೆ ಇಲ್ಲದ ಸಂಬಂಧ. ಇಬ್ಬರೂ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ, ಒಬ್ಬರೊಡನೆ ಒಬ್ಬರು ಸಮಯ ಕಳೆಯುತ್ತಾರೆ, ಕೆಲವೊಮ್ಮೆ ದೈಹಿಕ ಹತ್ತಿರವೂ ಇರುತ್ತದೆ. ಆದರೆ “ನಾವು ಏನು?” ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಇರಲ್ಲ. ಲೀವ್‌–ಇನ್‌ ರಿಲೇಷನ್‌ಶಿಪ್‌ನಂತೆ ಕಾಣಿಸಿದರೂ, ಅಲ್ಲಿ ಇರುವ ಬದ್ಧತೆ ಇಲ್ಲಿ ಇರಬೇಕೆಂದಿಲ್ಲ.

ಸಂವಹನ ಒಂದೇ ರೀತಿ ಇರಲ್ಲ. ಕೆಲ ದಿನಗಳು ಗಂಟೆಗಟ್ಟಲೆ ಮಾತು, ಕೆಲ ದಿನಗಳು ಸಂಪೂರ್ಣ ಮೌನ. ಭವಿಷ್ಯದ ಬಗ್ಗೆ ಪ್ಲ್ಯಾನ್ ಇಲ್ಲ. ಹಣಕಾಸು, ಜೀವನದ ನಿರ್ಧಾರಗಳು ಒಟ್ಟಿಗೆ ಆಗಲ್ಲ. ಕುಟುಂಬಕ್ಕೆ ಅಥವಾ ಸ್ನೇಹಿತರಿಗೆ ಪರಿಚಯಿಸುವುದಿಲ್ಲ; ಪರಿಚಯಿಸಿದರೂ “ಫ್ರೆಂಡ್” ಅಂತ ಮಾತ್ರ. ಪ್ಲ್ಯಾನ್‌ಗಳು ಹೆಚ್ಚಾಗಿ ವೀಕೆಂಡ್‌ ಅಥವಾ ಫ್ರೀ ಟೈಮ್‌ಗೆ ಸೀಮಿತ.

ಈ ಸಂಬಂಧಗಳ ಆಕರ್ಷಣೆ ಏನು?

ಎಮೋಷನಲ್‌ ಫ್ರೀಡಂ ಇರುತ್ತದೆ. ಕಂಟ್ರೋಲ್‌, ಒತ್ತಡ, ದೊಡ್ಡ ನಿರೀಕ್ಷೆಗಳಿಲ್ಲ. ವೃತ್ತಿ ಮತ್ತು ವೈಯಕ್ತಿಕ ಗುರಿಗಳಿಗೆ ಆದ್ಯತೆ. ಬಿಟ್ಟು ಹೋದರೂ ಭಾರೀ ನೋವು ಆಗೋದಿಲ್ಲ ಎಂಬ ಭಾವನೆ.

ಅಪಾಯ ಎಲ್ಲಿ?

ಪೂರ್ಣ ಪ್ರೀತಿ ಇಲ್ಲಿ ಸಿಗುವ ಭರವಸೆ ಇಲ್ಲ. ಮುಂದೆ ಗಟ್ಟಿ ಸಂಬಂಧ ಬೇಕಾದಾಗ ಇದೇ ಸಂಬಂಧ ಅಡ್ಡಿಯಾಗಬಹುದು. ಕೆಲ ಸಂದರ್ಭಗಳಲ್ಲಿ ಭಾವನಾತ್ಮಕ ಅಥವಾ ವೈಯಕ್ತಿಕ ಬ್ಲ್ಯಾಕ್‌ಮೇಲ್‌ ಸಾಧ್ಯತೆಯೂ ಇರುತ್ತದೆ.

ಒಟ್ಟಾರೆ ಹೇಳುವುದಾದರೆ, ಸಿಚುವೇಷನ್‌ಶಿಪ್‌ ಸುಲಭವಾಗಿ ಕಾಣಬಹುದು, ಆದರೆ ಸುರಕ್ಷಿತ ಅಲ್ಲ. ನಿಜವಾದ ಪ್ರೀತಿ, ನಂಬಿಕೆ ಮತ್ತು ಆತ್ಮೀಯತೆ ಅನುಭವಿಸಲು ಗಟ್ಟಿ, ಸ್ಪಷ್ಟ ಸಂಬಂಧವೇ ಅಗತ್ಯ. ಮಧ್ಯದಲ್ಲೇ ತೇಲುವ ಸಂಬಂಧಗಳು ಕ್ಷಣಿಕ ಸುಖ ಕೊಡಬಹುದು, ಆದರೆ ದೀರ್ಘಕಾಲದ ನೆಮ್ಮದಿ ಕೊಡಲ್ಲ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!