ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೋಮವಾರ ಸಂಜೆ ಸುರಿದ ಭಾರೀ ಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರದ ದರ್ಬೆಯಲ್ಲಿ ರಾಜಕಾಲುವೆಯಿಂದ ಮೇಲ್ಭಾಗದಲ್ಲಿ ಹರಿದ ಮಳೆ ನೀರು ಮನೆ, ಅಂಗಡಿಗಳಿಗೆ ನುಗ್ಗಿದ ಘಟನೆ ನಡೆದಿದೆ.
ಪಕ್ಕದ ಕಿರಿದಾದ ರಾಜಕಾಲುವೆಯಿಂದ ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ಕೃತಕ ನೆರೆಯುಂಟಾಗಿ ದರ್ಬೆ ನಿವೃತ್ತ ಶಿಕ್ಷಕರೊಬ್ಬರ ಮನೆಯೊಳಗೆ ಮನೆಯೊಳಗೆ ನೀರು ನುಗ್ಗಿದೆ. ಮನೆಯೊಳಗಿನ ಸಾಮಾಗ್ರಿಗಳೆಲ್ಲ ಮಳೆ ನೀರಿಗೆ ಒದ್ದೆಯಾಗಿದೆ. ಮುಖ್ಯ ರಸ್ತೆ ಬದಿಯ ಅಂಗಡಿಗಳಿಗೂ ನೀರು ನುಗ್ಗಿದೆ.
ಕಳೆದ ಹಲವು ವರ್ಷಗಳಿಂದ ಕಿರಿದಾದ ರಾಜಕಾಲುವೆಯ ಸಮಸ್ಯೆಯಿಂದಾಗಿ ಇಲ್ಲಿ ಪ್ರವಾಹ ಸ್ಥಿತಿ ಉಂಟಾಗುತ್ತಿದೆ. ಅನಂತರದಲ್ಲಿ ಮುಖ್ಯರಸ್ತೆಗೆ ಮೋರಿ ಅಳವಡಿಸಿದ್ದರೂ ನೀರು ಮೇಲ್ಭಾಗದಲ್ಲಿ ಹರಿಯುವ ಸ್ಥಿತಿ ಮುಂದುವರೆದಿದೆ.
ಕೋರ್ಟ್ ರಸ್ತೆಯಲ್ಲೂ ನೀರು
ಮಳೆಗೆ ನಗರದ ಹೃದಯ ಭಾಗದ ಕೋರ್ಟ್ ರಸ್ತೆಯಲ್ಲೂ ಸಮಸ್ಯೆ ಉಂಟಾಗಿದೆ. ಇಲ್ಲಿನ ಚಿನ್ನದಂಗಡಿ ಹಾಗೂ ಫ್ಯಾನ್ಸಿ ಅಂಗಡಿಯೊಂದಕ್ಕೆ ನೀರು ನುಗ್ಗಿ ತೊಂದರೆ ಅನುಭವಿಸುವಂತಾಗಿದೆ.