ಬಿಜೆಪಿಯ ಗೋವಿಂದ ಕಾರಜೋಳ, ಬೊಮ್ಮಾಯಿಗೆ ಮುನ್ನಡೆ, ರಾಯಚೂರು, ಬಳ್ಳಾರಿಯಲ್ಲಿ ʼಕೈʼ ಜೈ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಲೋಕಸಭಾ ಚುನಾವಣೆಯ 7 ಹಂತಗಳು ಮುಕ್ತಾಯಗೊಂಡಿದ್ದು, ಇಂದು ಮತ ಎಣಿಕೆ ಕಾರ್ಯ ಶುರುವಾಗಿದ್ದು, ಫಲಿತಾಂಶ ಹೊರಬೀಳಲಿದೆ, ಸದ್ಯ ರಾಜ್ಯದಲ್ಲಿ ಏನಾಗ್ತಿದೆ, ಯಾರು ಲೀಡ್‌ನಲ್ಲಿದ್ದಾರೆ ನೋಡಿ..

ಆರನೇ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ 2,09,765 ಮತಗಳನ್ನು ಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಬಿ ಎನ್ ಚಂದ್ರಪ್ಪ 1,90,740 ಮತಗಳನ್ನು ಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ 22,173 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಬಳ್ಳಾರಿ ಲೋಕಸಭೆ ಕ್ಷೇತ್ರದ ಚುನಾವಣೆ ಎಣಿಕೆ ಕಾರ್ಯ ನಡೆದಿದ್ದು, 5 ನೇ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಅವರು ಮುನ್ನಡೆ ಕಾಯ್ದುಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಈ .ತುಕಾರಾಂ ಅವರು, 2,02,447, ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಅವರು 1,57,393 ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಈ ತುಕಾರಾಂ ಅವರು, 45,054 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಹಾವೇರಿ: ಬಸವರಾಜ ಬೊಮ್ಮಾಯಿ : 1,44,617, ಆನಂದಸ್ವಾಮಿ ಗಡ್ಡದೇವರಮಠ
ಕಾಂಗ್ರೆಸ್: 1,40,023, ಬಿಜೆಪಿ ಅಭ್ಯರ್ಥಿಗೆ 4,594 ಮತಗಳ ಮುನ್ನಡೆ ಮತಗಳ ಮುನ್ನಡೆ

ರಾಯಚೂರು : ಐದನೇ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್ ಮತ್ತೆ ಮುನ್ನಡೆ. ಬಿಜೆಪಿಯ ಅಮರೇಶ್ವರ ನಾಯಕ- 48,163 ಪಡೆದರೆ ಕಾಂಗ್ರೆಸ್ಸಿನ ಜಿ.ಕುಮಾರ ನಾಯಕ 51,825 ಮತಗಳನ್ನು ಪಡೆದುಕೊಂಡಿದ್ದಾರೆ. ಕಾಂಗ್ರೆಸ್ಸಿನ ಜಿ.ಕುಮಾರ ನಾಯಕ 3661 ಮುನ್ನಡೆ ಸಾಧಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!