ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮ್ಮ ಸಿಂಪ್ಲಿಸಿಟಿಗೆ ಹೆಸರಾಗಿರುವ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಫಲಿತಾಂಶದ ದಿನವೂ ತಮ್ಮ ಸಿಂಪ್ಲಿಸಿಟಿ ಮುಂದುವರಿಸಿದ್ದಾರೆ!
ಯಾವುದೇ ಗೌಜಿ ಗದ್ದಲಗಳಿಲ್ಲದೆ, ಕಾರ್ಯಕರ್ತರು, ಅಭಿಮಾನಿಗಳ ದಂಡು ಇಲ್ಲದೆ ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಚೇರ್ ಎಳೆದುಕೊಂಡು ತಮ್ಮಪಾಡಿಗೆ ಚುನಾವಣಾ ಮತ ಎಣಿಕೆಯ ನೇರಪ್ರಸಾರ ವೀಕ್ಷಿಸುತ್ತಿದ್ದಾರೆ!
ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್, ಕುಂದಾಪುರ ಬಿಜೆಪಿ ಮುಖಂಡ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ವಿಭಾಗ ಪ್ರಭಾರಿ ಕಿದಿಯೂರು ಉದಯ್ ಕುಮಾರ್ ಶೆಟ್ಟಿ, ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಶಾಸಕ ಜೀವರಾಜ್ ಕೋಟಗೆ ಸಾಥ್ ನೀಡಿದ್ದಾರೆ.