ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾ.ಮಂಜುನಾಥ್ ಭರ್ಜರಿ ಗೆಲುವು ದಾಖಲಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಡಿಕೆ ಬ್ರದರ್ಸ್ ಭದ್ರಕೋಟೆ. ಅಂತಹ ಭದ್ರಕೋಟೆಯನ್ನು ಡಾ.ಮಂಜುನಾಥ್ ಪುಡಿ ಮಾಡಿದ್ದಾರೆ.
ಕಳೆದ ವಿಧಾನಸಭೆ ಎಲೆಕ್ಷನ್ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಈ ಕ್ಷೇತ್ರದಲ್ಲಿ ಪ್ರಚಾರ ನಡಿಸದೇ ದಾಖಲೆಯ ಅಂತರದ ಗೆಲುವು ದಾಖಲಿಸಿದ್ದರು. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜನ ಡಾಕ್ಟರ್ ಕೈ ಹಿಡಿದು ಅವರನ್ನು ಗೆಲ್ಲಿಸಿ ಕೊಟ್ಟಿದ್ದಾರೆ.
ಈ ಸೋಲಿನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ ಸುರೇಶ್ ಅವರು, ನಾನು ಬಿಜೆಪಿ ಅಭ್ಯರ್ಥಿ ಡಾ.ಸಿಎನ್ ಮಂಜುನಾಥ್ ಗೆ ಅಭಿನಂದನೆ ಸಲ್ಲಿಸುತ್ತೇನೆ. ಮತದಾರರ ತೀರ್ಪಿಗೆ ತಲೆ ಭಾಗುತ್ತೇನೆ ಎಂದರು.ರಾಜ್ಯಕ್ಕೆ ಒಳ್ಳೇದಾಗಲಿ. ಕ್ಷೇತ್ರಕ್ಕೆ ಒಳ್ಳೇದಾಗಲಿ. ನಾನು ನನ್ನ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತನಾಗಿ ಜೊತೆಗೆ ಇರುತ್ತೇನೆ. ನಾನು ನಿಮ್ಮಲ್ಲಿ ಬೆಳೆದವನು. ನಿಮ್ಮ ಜೊತೆಗೆ ಓಡಾಡಿದವನು. ಆ ಕೆಲಸ ನಿರಂತರವಾಗಿ ಇರುತ್ತೇನೆ. ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು ಗೆಲುವು ಇದ್ದದ್ದೇ ಎಂಬುದಾಗಿ ತಿಳಿಸಿದರು.
D K SURESH Bengaluru Gramantara Lokasabha kshetra dinda Congress Abhyarthi yagi spardisi sotiddare Adare hatasharagade olleya matugalannadiddare