Election Results Live: ಇಂದೋರ್‌ನಲ್ಲಿ ಬರೋಬ್ಬರಿ 1 ಲಕ್ಷಕ್ಕೂ ಅಧಿಕ ಮತ NOTA

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಲೋಕಸಭಾ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದೆ. ಈ ಮಧ್ಯೆ ಮಧ್ಯ ಪ್ರದೇಶದ ಇಂದೋರ್‌ನಲ್ಲಿ ʼನೋಟಾʼ (ಮೇಲಿನ ಯಾರೂ ಅಲ್ಲ -NOTA)ಕ್ಕೆ 1 ಲಕ್ಷಕ್ಕೂ ಅಧಿಕ ಮತ ಬಿದ್ದಿದೆ. ಆ ಮೂಲಕ ಕ್ಷೇತ್ರದಲ್ಲಿ ʼನೋಟಾʼ ಎರಡನೇ ಸ್ಥಾನ ಪಡೆದುಕೊಂಡಿದೆ.

ʼನೋಟಾʼಕ್ಕೆ ಸುಮಾರು 1,11,691 ಮತ ಬಿದ್ದಿದೆ. ಈ ಮೂಲಕ ಸುಮಾರು 11 ವರ್ಷಗಳಲ್ಲಿ ಅತೀ ಹೆಚ್ಚು ʼನೋಟಾʼ ಮತ ಪಡೆದಿರುವ ದಾಖಲೆ ನಿರ್ಮಿಸಿದೆ. ಈ ಹಿಂದೆ 2019ರಲ್ಲಿ ಬಿಹಾರದ ಗೋಪಾಲ್‌ಗಂಜ್‌ ಲೋಕಸಭಾ ಕ್ಷೇತ್ರದಲ್ಲಿ ʼನೋಟಾʼಕ್ಕೆ 51,660 ಮತ ಲಭಿಸಿತ್ತು. ಇದು ಇದುವರೆಗಿನ ಅತೀ ಹೆಚ್ಚಿನ ʼನೋಟಾʼ ಮತ ಎನಿಸಿಕೊಂಡಿತ್ತು. ಇದೀಗ ಇಂದೋರ್‌ ಈ ದಾಖಲೆಯನ್ನು ಮುರಿದಿದೆ.

ಇಲ್ಲಿ ಬೆಜೆಪಿಯ ಅಭ್ಯರ್ಥಿ ಶಂಕರ್ ಲಾಲ್ವಾ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!