ಹೊಸದಿಗಂತ ಡಿಜಿಟಲ್ ಡೆಸ್ಕ್:
ತೀವ್ರ ಕುತೂಹಲ ಕೆರಳಿಸಿದ್ದ ಬಳ್ಳಾರಿ ಲೋಕಸಭಾ ಕ್ಷೇತ್ರದ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಇ. ತುಕಾರಾಂ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಮಾಜಿ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ಬಿ ಶ್ರೀರಾಮುಲುಗೆ ಭಾರಿ ಮುಖಭಂಗವಾಗಿದ್ದು, ಬಳ್ಳಾರಿ ಜನತೆ ಶ್ರೀರಾಮುಲು ಕೈ ಬಿಟ್ಟಿದ್ದಾರೆ.
ಇತ್ತೀಚಿನ ವರದಿಗಳ ಪ್ರಕಾರ ತುಕಾರಾಂ ಒಟ್ಟು 5,93,839 ಮತಗಳನ್ನು ಪಡೆದಿದ್ದು, 98,294 ಮತಗಳ ಅಂತರದಲ್ಲಿ ಬಿಜೆಪಿಯ ಬಿ ಶ್ರೀರಾಮುಲು ವಿರುದ್ಧ ಜಯ ಗಳಿಸಿದ್ದಾರೆ. ಇಲ್ಲಿ ಶ್ರೀರಾಮುಲು ಒಟ್ಟು 4,95,545 ಮತಗಳನ್ನು ಪಡೆದಿದ್ದಾರೆ.