ಹೊಸದಿಗಂತ ಡಿಜಿಟಲ್ ಡೆಸ್ಕ್:
ನರೇಂದ್ರ ಮೋದಿ ಅವರು 3ನೇ ಬಾರಿಗೆ ಪ್ರಧಾನಿಯಾಗಲಿದ್ದಾರೆ. ಆದರೆ, ಸಕಾರಾತ್ಮಕವಾಗಿ ಬಿಜೆಪಿಗೆ ಅಧಿಕಾರಕ್ಕೆ ಬರಲು ಎನ್‌ಡಿಎ ಅಗತ್ಯವಿದೆ. ಇದು ಒಳ್ಳೆಯ ಬೆಳವಣಿಗೆ ಎಂದು ನಟ ಚೇತನ್ ಅವರು ಹೇಳಿಕೊಂಡಿದ್ದಾರೆ.
ಪ್ರಧಾನಿ ಮೋದಿ ಮೂರನೇ ಬಾರಿ ಅಧಿಕಾರ ಮುಂದುವರಿಸಬಹುದು. ಆದರೆ ಬಿಜೆಪಿಗೆ ಇದೊಂದು ದೊಡ್ಡ ಪಾಠ. ಇದರರ್ಥ ಬಿಜೆಪಿ ಹಿಂದುತ್ವ ಮತ್ತು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಯಂತಹ ಒಕ್ಕೂಟ ವಿರೋಧಿ ನೀತಿಗಳನ್ನು ಅಷ್ಟು ಸುಲಭವಾಗಿ ಜಾರಿಗೆ ತರುವುದಿಲ್ಲ. ಇದು ಒಳ್ಳೆಯದೇ. ಇದು ಮೋದಿಯವರ ವಿಜಯವಲ್ಲ, ಪ್ರಜಾಪ್ರಭುತ್ವದ ವಿಜಯ” ಎಂದು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಚೇತನ್ ಬರೆದುಕೊಂಡಿದ್ದಾರೆ.
ಸರ್ಕಾರ ರಚನೆಗೆ 272 ಸ್ಥಾನಗಳು ಸರಳ ಬಹುಮತವಾಗಿದೆ. ಎನ್‌ಡಿಎ ಸರ್ಕಾರ ರಚಿಸುವ ಸಾಧ್ಯತೆ ಇದೆ. ಆದರೂ 228 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರುವ ಇಂಡಿಯಾ ಮೈತ್ರಿಕೂಟ ಎನ್‌ಡಿಎ ಹೊರಗಿಟ್ಟು ಸರ್ಕಾರ ರಚಿಸುವ ಲೆಕ್ಕಾಚಾರದಲ್ಲಿದೆ.