ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕಳಪೆ ಸಾಧನೆ ಹಿನ್ನೆಲೆ ಮೋದಿ ರಾಜೀನಾಮೆ ನೀಡಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಬೆನ್ನೆಲುಬನ್ನು ನಾವು ಮುರಿದಿದ್ದೇವೆ ಮೋದಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಸಂದೇಶ್ ಖಾಲಿ ಬಗ್ಗೆ ಸುಳ್ಳು ಹಬ್ಬಿಸಿದರು. ಬಿಜೆಪಿಯವರು ಟಿಡಿಪಿ, ಜೆಡಿಯು ಆಸರೆಯ ಮೇಲೆ ನಿಂತಿದ್ದಾರೆ. ಶ್ರೀರಾಮ ಮಂದಿರವನ್ನು ಚುನಾವಣೆ ವಿಷಯ ಮಾಡಿದರು. ಆದರೆ ಅಯೋಧ್ಯೆಯಲ್ಲಿ ಬಿಜೆಪಿ ಸೋಲು ಕಂಡಿದೆ. ಮೂರನೇ ಎರಡರಷ್ಟು ಸೀಟು ಬಿಜೆಪಿಗೆ ಸಿಕ್ಕಿಲ್ಲ. ನರೇಂದ್ರ ಮೋದಿ ಸಂವಿಧಾನ ಬದಲಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ.