ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಮನೆ ಮೇಲೆ ಕಲ್ಲು ತೂರಾಟ ನಡೆದಿದೆ.
ನಿನ್ನೆ ರಾತ್ರಿ ಚಿಕ್ಕಬಳ್ಳಾಪುರ ಪಟ್ಟಣದ ಕಂದವಾರದಲ್ಲಿರುವ ಪ್ರದೀಪ್ ಈಶ್ವರ್ ಅವರ ಮನೆ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ದುಷ್ಕರ್ಮಿಗಳು ಮನೆಯ ಕಿಟಕಿಗಳನ್ನು ಒಡೆದಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಡಾ.ಕೆ.ಸುಧಾಕರ್ ಜಯ ಸಾಧಿಸಿರುವ ಹಿನ್ನೆಲೆ ಅವರ ಮನೆ ಮೇಲೆ ಕಲ್ಲು ತೂರಾಟ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಶಾಸಕರ ಮನೆಗೆ ಭೇಟಿ ನೀಡಿ ಪ್ರವೇಶ ದ್ವಾರವನ್ನು ಪರಿಶೀಲಿಸಿದರು. ಹೆಚ್ಚಿನ ವಿವರಗಳು ಇನ್ನೂ ಬಾಕಿ ಉಳಿದಿವೆ.
ತಪ್ಪು ಮಾಡಿದರು ಈ ಜನ. ಮನೆಗೆ ಕಲ್ಲು ಹೊಡೆಯಬಾರದಿತ್ತು. ದುರಹಂಕಾರದಿಂದ ಮಾತನಾಡಿದ ಅವನಿಗೆ ಸಗಣಿ, ಮೊಟ್ಟೆ, ಕುಸಿದು ರಾಶಿಯಿಂದ ಅಭಿಷೇಕ್ ಮಾಡಬೇಕಾಗಿತ್ತು.