ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಕಾಜಲ್ ಅಗರ್ವಾಲ್ ತಾಯಿಯಾದ ನಂತರ ತುಂಬಾ ಬ್ಯುಸಿಯಾಗಿದ್ದಾರೆ. ಯಾವುದೇ ಸಿನಿಮಾ ಬಗ್ಗೆ ತಲೆ ಕೆಡಿಸಿಕೊಳ್ಳದೆ ಮಗುವಿನ ಬಗ್ಗೆ ಗಮನ ಹರಿಸ್ತಿದ್ದಾರೆ. ಈಗಿನ ಬಾಡಿ ಕಾನ್ಶಿಯಸ್ ತಾಯಂದಿರಿಗೆ ಕಾಜಲ್ ಕಿವಿಮಾತು ಹೇಳಿದ್ದಾರೆ.
ಮಗು ಬಗ್ಗೆ ಗಮನ ಕೊಡಿ, ತೂಕ ಹೆಚ್ಚಾದ್ರೆ ಏನಾಗೋಯ್ತು? ವರ್ಷಗಳು ನೀಡಿ ತೂಕ ಇಳಿಸಿ. ಒಂದೇ ಬಾರಿಗೆ ಸಣ್ಣ ಆಗಬೇಕು ಎಂದೇನಿಲ್ಲ. ಮುಂಚೆನನಗೂ ನನ್ನ ದೇಹದ ಬಗ್ಗೆ ಅತಿಯಾದ ವ್ಯಾಮೋಹ ಇತ್ತು. ಆದರೆ ಈಗ ಅದನ್ನು ನಿಲ್ಲಿಸಿದ್ದೇನೆ. ಫಿಟ್ ಆಗೋಕಿಂತ ಮಗುವಿಗೆ ಸಮಯ ನೀಡೋದು ಮುಖ್ಯ. ಒಂದೆರಡು ಸೈಝ್ ದೊಡ್ಡ ಬಟ್ಟೆ ಹಾಕಿದ್ರೆ ಏನಾಗೋದಿಲ್ಲ. ಈಗಿನ್ನೂ ತಾಯಿಯಾಗಿದ್ದೀರಿ, ತಾಯ್ತನ ಎಂಜಾಯ್ ಮಾಡಿ, ಟಾರ್ಚರ್ ಮಾಡಿಕೊಳ್ಳಬೇಡಿ ಎಂದಿದ್ದಾರೆ.