ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸಗಡದ ಬಿಜಾಪುರ ಜಿಲ್ಲೆಯ 2 ಸ್ಥಳಗಳಿಂದ 9 ನಕ್ಸಲೀಯರನ್ನು ಭದ್ರತಾ ಪಡೆ ಸಿಬ್ಬಂದಿ (Security Forces) ಇಂದು (ಬುಧವಾರ) ಬಂಧಿಸಿವೆ.
ಬಂಧಿಸಲಾಗಿರುವ ಈ ಐವರು ಉಗ್ರರನ್ನು ಗುಡ್ಡು ಕುಮ್ಮಾ (25), ಬುಧು ಕುಮ್ಮಾ (30), ಸುರೇಶ್ ಓಯಮ್ (29), ವಿನೋದ್ ಕೊರ್ಸಾ (25) ಮತ್ತು ಮುನ್ನಾ ಕುಮ್ಮಾ (25) ಎಂದು ಗುರುತಿಸಲಾಗಿದೆ. ಫರ್ಸೆಗಢ ಪೊಲೀಸ್ ಠಾಣೆ ವ್ಯಾಪ್ತಿಯ ಮಂಡೆಮ್-ಕುಪ್ರೆಲ್ ಗ್ರಾಮಗಳಲ್ಲಿ ಬಂಧಿಸಲಾಗಿದೆ. ಐವರು ಉಗ್ರರ ತಲೆಯ ಮೇಲೆ ತಲಾ 10,000 ರೂ. ಬಹುಮಾನ ಇತ್ತು.
ಮೇ 15ರಂದು ಫರ್ಸೆಗಢ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಆಕಾಶ್ ಮಸಿಹ್ ಮತ್ತು ಕಾನ್ಸ್ಟೆಬಲ್ ಸಂಜಯ್ ಪೊಲೀಸ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿತ್ತು.
ಇದಲ್ಲದೆ, ಇತರ ನಾಲ್ವರು ನಕ್ಸಲೀಯರನ್ನು ಮದ್ದೇಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ. ಎಲ್ಲಾ 9 ನಕ್ಸಲೀಯರು ಕೊಲೆ, ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಲು ಸುಧಾರಿತ ಸ್ಫೋಟಕ ಸಾಧನ (ಐಇಡಿ) ಅಳವಡಿಸುವುದು, ಅಕ್ರಮ ಸುಲಿಗೆ, ಮಾವೋವಾದಿ ಪೋಸ್ಟರ್ಗಳು ಮತ್ತು ಬ್ಯಾನರ್ಗಳನ್ನು ಹಾಕುವ ಘಟನೆಗಳಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.