ಹೊಸದಿಗಂತ ವರದಿ,ಪಾಂಡವಪುರ:
ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶವಾಗಿ ರೈತನೋರ್ವ ಸಾವನ್ನಪ್ಪಿರುವ ಘಟನೆ ತಾಲೂಕಿನ ನುಗ್ಗಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಹದೇವು(52) ಮೃತ ರೈತ. ಗ್ರಾಮದ ಹೊರವಲಯದಲ್ಲಿರುವ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದಿದ್ದು ವಿದ್ಯುತ್ ಸ್ಪರ್ಶವಾಗಿದೆ. ಇದರಿಂದಾಗಿ ರೈತ ಮಹದೇವು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಜಮೀನಿಗೆ ಹೋದ ತಂದೆ ಸಂಜೆಯಾದರು ಮನೆಗೆ ಬಾರದ ಹಿನ್ನೆಲೆಯಲ್ಲಿ ಪುತ್ರ ಜಮೀನಿಗೆ ಹೋಗಿ ನೋಡಿದಾಗ ತಂದೆ ಮಹದೇವು ಸಾವಪ್ಪಿನವರುವುದು ಬೆಳಕಿಗೆ ಬಂದಿದೆ.
ವಿಷಯ ತಿಳಿಸಿದ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನೀಡಿದ್ದಾರೆ.