ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾರ್ದಿಕ್ ಪಾಂಡ್ಯ, ಬುಮ್ರಾ, ಆರ್ಶದೀಪ್ ಸಿಂಗ್ ಮಾರಕ ದಾಳಿಗೆ ಐರ್ಲೆಂಡ್ ತಂಡವು ಕೇವಲ 96 ರನ್‌ಗಳಿಗೆ ಸರ್ವಪತನ ಕಂಡಿದೆ.
ಈ ಮೂಲಕ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಪಡೆ ಶುಭಾರಂಭ ಮಾಡಲು ಸಾಧಾರಣ ಗುರಿ ಸಿಕ್ಕಿದೆ.
ನಾಸೌ ಕೌಂಟಿ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ಐರ್ಲೆಂಡ್ ಎದುರು ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು.
ಮೂರನೇ ಓವರ್‌ನಲ್ಲೇ ಆರ್ಶದೀಪ್ ಸಿಂಗ್, ಐರ್ಲೆಂಡ್ ಆರಂಭಿಕ ಬ್ಯಾಟರ್‌ಗಳಾದ ನಾಯಕ ಪೌಲ್ ಸ್ಟರ್ಲಿಂಗ್(2) ಹಾಗೂ ಆಂಡ್ರ್ಯೂ ಬಲ್ಬಿರ್ನ್ ಅವರನ್ನು ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಇನ್ನು ಹ್ಯಾರಿ ಟೆಕ್ಟರ್ 4 ರನ್ ಗಳಿಸಿ ಬುಮ್ರಾಗೆ ವಿಕೆಟ್ ಒಪ್ಪಿಸಿದರು. ಇನ್ನು ವಿಕೆಟ್ ಕೀಪರ್ ಬ್ಯಾಟರ್ ಲಾರ್ಕನ್ 10 ಹಾಗೂ ಕುರ್ಟಿಸ್ ಕ್ಯಾಂಪರ್ 12 ರನ್ ಗಳಿಸಿ ಹಾರ್ದಿಕ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು. ಒಂದು ಕಡೆ ನಿರಂತರವಾಗಿ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಚುರುಕಿನ ಬ್ಯಾಟಿಂಗ್ ನಡೆಸಿದ ಗೆರಾತ್ ಡೆಲ್ನೆ27 ರನ್ ಗಳಿಸಿ ರನೌಟ್ ಆದರು. ಜೋಶ್ವಾ ಲಿಟ್ಲ್ 14 ರನ್ ಗಳಿಸಿ ಕೊನೆಯಲ್ಲಿ ಉತ್ತಮ ಸಾಥ್ ನೀಡಿದರು.