Sunday, January 11, 2026

ವಿಕಸಿತ ಭಾರತದ ಗುರಿಯತ್ತ ದೇಶದ ದಿಟ್ಟ ಹೆಜ್ಜೆ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಕಸಿತ ಭಾರತದ ಗುರಿಯತ್ತ ದೇಶ ಸಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವೈಬ್ರೆಂಟ್ ಗುಜರಾತ್ ಸಮಾವೇಶದ ಭಾಗವಾಗಿ ರಾಜಕೋಟ್​ನಲ್ಲಿ ಟ್ರೇಡ್ ಶೋ ಉದ್ಘಾಟಿಸಿ ಮಾತನಾಡಿದ ನರೇಂದ್ರ ಮೋದಿ ಅವರು, ಭಾರತ ಬಹಳ ವೇಗವಾಗಿ ಮುಂದುವರಿದ ದೇಶವಾಗಿ ಬೆಳೆಯುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಳೆದ 11 ವರ್ಷದಲ್ಲಿ ಭಾರತವು ವಿಶ್ವದ ಅತಿದೊಡ್ಡ ಮೊಬೈಲ್ ಡಾಟಾ ಬಳಕೆದಾರ ದೇಶವಾಗಿತ್ತು. ಈಗ ಎರಡನೇ ಅತಿದೊಡ್ಡ ಮೊಬೈಲ್ ತಯಾರಕ ದೇಶವೆನಿಸಿದೆ’ ಎಂದು ಮೋದಿ ಹೇಳಿದ್ದಾರೆ.

‘ಭಾರತ ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟಪ್ ಇಕೋಸಿಸ್ಟಂ ಹೊಂದಿದೆ. ಮೂರನೇ ಅತಿದೊಡ್ಡ ವೈಮಾನಿಕ ಮಾರುಕಟ್ಟೆ ಹೊಂದಿದೆ. ವಿಶ್ವದ ಮೂರು ಅತಿದೊಡ್ಡ ಮೆಟ್​ರೋ ರೈಲು ನೆಟ್ವರ್ಕ್​ಗಳಲ್ಲಿ ಒಂದೆನಿಸಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.

ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ಧಾವಿಸುತ್ತಿದೆ. ಈ ಪ್ರಯಾಣದಲ್ಲಿ ಗುಜರಾತ್ ಪ್ರಮುಖ ಪಾತ್ರ ವಹಿಸಿದೆ. ದೇಶ ವಿದೇಶಗಳ ಹೂಡಿಕೆದಾರರಿಗೆ ಪ್ರಮುಖ ಬೆಳವಣಿಗೆ ಎಂಜಿನ್ ಆಗಿ ಗುಜರಾತ್ ಹೊಮ್ಮಿದೆ. ಎಂಎಸ್​ಎಂಇಗಳಿಂದ ಹಿಡಿದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳವರೆಗೆ ಎಲ್ಲರೂ ಗುಜರಾತ್ ಜೊತೆ ಬೆಳೆಯುತ್ತಿದ್ದಾರೆ ಎಂದು ಮೋದಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮುಕೇಶ್ ಅಂಬಾನಿ ಮೊದಲಾದ ವಿವಿಧ ಉದ್ಯಮಿಗಳು ಉಪಸ್ಥಿತರಿದ್ದರು.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!