ಹೊಸದಿಗಂತ ಡಿಜಿಟಲ್ ಡೆಸ್ಕ್: ನಿಮ್ಮನ್ನೇ ನಂಬಿ ಬಂದಿದ್ದೀವಿ, 8,500 ರೂ. ಕೊಡಿ…
ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮತದಾರರಿಗೆ ಕಟಕಟ್ ಭರವಸೆ ಕೊಟ್ಟಿದ್ದರು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ್ರೆ ಜುಲೈ ತಿಂಗಳಿಂದ ಮಹಿಳೆಯರ ಬ್ಯಾಂಕ್ ಖಾತೆಗೆ ಕಟಕಟ್, ಕಟಕಟ್ ಅಂತ 8,500 ರೂಪಾಯಿ ಜಮೆಯಾಗಲಿದೆ ಎಂದು ಹೇಳಿದ್ದರು. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ನಲ್ಲಿ 8,500 ರೂಪಾಯಿ ನೀಡುವ ಭರವಸೆಯನ್ನು ನೀಡಲಾಗಿತ್ತು. ಇದೀಗ ಮಹಿಳೆಯರು ನಮ್ಮ ಹಣ ಕೊಡಿ ಎಂದು ಕಾಂಗ್ರೆಸ್ ಕಚೇರಿ ಮುಂದೆ ಕ್ಯೂ ನಿಂತಿದ್ದಾರೆ.
“We came here to get the money that was guaranteed to us,” says one of the many Muslim women who gathered today outside Congress Offices in Lucknow with guarantee cards demanding what was promised to them by Rahul Gandhi – a monthly stipend of Rs 8,500 amounting to a lac a year. pic.twitter.com/TRYuaWlg1M
— Anand Ranganathan (@ARanganathan72) June 5, 2024
ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ಗಳನ್ನು ಹಿಡಿದುಕೊಂಡು ಬಂದಿರುವ ಮುಸ್ಲಿಂ ಸಮುದಾಯದ ಮಹಿಳೆಯರು ಚುನಾವಣೆಗೂ ಮುಂಚೆ ಕೊಟ್ಟ ಭರವಸೆಯಂತೆ ತಿಂಗಳಿಗೆ ಎಂಟೂವರೆ ಸಾವಿರ ರೂಪಾಯಿ ನೀಡಿ ಎಂದು ಪಟ್ಟು ಹಿಡಿದಿದ್ದಾರೆ. ಲಕ್ನೋ ಕಾಂಗ್ರೆಸ್ ಕಚೇರಿ ಮುಂದೆ ಮಹಿಳೆಯರು, ನಾವು ನಮಗೆ ಭರವಸೆ ಕೊಟ್ಟ 8,500 ರೂಪಾಯಿ ಹಣ ಪಡೆಯಲು ಬಂದಿದ್ದೇವೆ ಎಂದು ಹೇಳಿದ್ದಾರೆ.