ಹೊಸದಿಗಂತ ಡಿಜಿಟಲ್ ಡೆಸ್ಕ್:
ಫಲಿತಾಂಶ ಪ್ರಕಟವಾದ ಎರಡು ದಿನಗಳಲ್ಲಿ ಎನ್ಡಿಎ ಮೈತ್ರಿಕೂಟದ ಒಟ್ಟು ಸ್ಥಾನಗಳ ಸಂಖ್ಯೆ 293ರಿಂದ 303ಕ್ಕೆ ಏರಿಕೆಯಾಗಿದೆ.
ಹೌದು, ಏಳು ಸ್ವತಂತ್ರ ಸಂಸದರು ಮತ್ತು ಸಣ್ಣ ಪಕ್ಷಗಳ ಮೂವರು ಸಂಸದರ ಎನ್ಡಿಎ ಸರ್ಕಾರವನ್ನು ಬೆಂಬಲಿಸುತ್ತಿದ್ದಾರೆ. ಪ್ರಧಾನಿ ಮೋದಿಯವರ ನಾಯಕತ್ವದ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಎನ್ಡಿಎ ಮೈತ್ರಿಕೂಟದ ಸಂಖ್ಯೆಯನ್ನು ಹೆಚ್ಚಿಸಲು ಬಿಜೆಪಿಯಿಂದ ಯಾವುದೇ ಅಧಿಕೃತ ಘೋಷಣೆಯಾಗಿಲ್ಲ. ಆದರೆ, ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರ ಪೋಸ್ಟ್ನಿಂದ ಇದೀಗ ಚರ್ಚೆ ಆರಂಭವಾಗಿದೆ.
ಬುಧವಾರ ನಡೆದ ಎನ್ ಡಿಎ ನಾಯಕತ್ವ ಸಭೆಯ ಬಳಿಕ ಗಿರಿರಾಜ್ ಸಿಂಗ್ ನಾಯಕರ ಫೋಟೋ ಹಾಕಿ ಎನ್ ಡಿಎ 303 ಎಂದು ಬರೆದಿದ್ದರು.ಆದರೆ ಕೆಲವೆಡೆ ಈ ಪೋಸ್ಟ್ ತೆಗೆದು ಎನ್ ಡಿಎ 3.0 ಎಂದು ಪ್ರಕಟಿಸಿದ್ದಾರೆ.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಎನ್ಡಿಎ 293 ಸ್ಥಾನಗಳನ್ನು, I.N.D.I.A 233 ಸ್ಥಾನಗಳನ್ನು ಮತ್ತು ಇತರರು 17 ಸ್ಥಾನಗಳನ್ನು ಗೆದ್ದಿದ್ದಾರೆ. ಸಂಸತ್ತಿನಲ್ಲಿ ಬಹುಮತ ಪಡೆಯಲು ಸರ್ಕಾರಕ್ಕೆ 272 ಸ್ಥಾನಗಳ ಅಗತ್ಯವಿದೆ.
ಮಳೆಗಾಲದ ಖರೀದಿ ವ್ಯವಹಾರ ಫುಲ್ ಸ್ವಿಂಗ್ ಆಗಿರಬಹುದು,, ಇದೇನು ದೊಡ್ಡ ವಿಷಯ ಅಲ್ಲ ಬಿಡಿ,, ಶಾಸಕರನ್ನು ಖರೀದಿಸಿ ಚುನಾಯಿತ ಸರ್ಕಾರವನ್ನೇ ಡಬ್ಬಾಕಿದ ಉದಾಹರಣೆ ಇದೆ,, ಅವರಿಗೆ ಇವೆಲ್ಲ ಬಾಯೆ ಹಾತ್ ಕಾ ಖೇಲ ಹೈ,,
It is not Bharathi. It is I.N.D.I. ALLIANCE. THIS statement of Bharathi won 233 should be changed.