ಎಲ್ಲರ ಜೀವನದಲ್ಲಿಯೂ ಟಾಕ್ಸಿಕ್ ಜನ ಇದ್ದೇ ಇರುತ್ತಾರೆ. ನೀವು ಅವರ ಮಾತು ಕೇಳಿದರೆ ನಿಮ್ಮ ಜೀವನವನ್ನೇ ಹಾಳು ಮಾಡೋಕೆ ತಯಾರಿರ್ತಾರೆ. ಅಂಥ ಜನ ಯಾರು ಎಂದು ನೀವು ಗುರುತಿಸಿದ ತಕ್ಷಣ ಅವರಿಂದ ದೂರ ಇರಿ… ಹೇಗೆ ನೋಡಿ..
ಅವರ ಬಗ್ಗೆ ನಿಮಗೇನು ಒಪಿನಿಯನ್ ಇದೆ, ಅವರ್ಯಾಕೆ ನಿಮಗೆ ಇಷ್ಟ ಆಗುತ್ತಿಲ್ಲ, ಓಪನ್ ಆಗಿ ಹೇಳಿ.
ಇಬ್ಬರ ಮಧ್ಯೆ ಸ್ವಲ್ಪ ಡಿಸ್ಟಾನ್ಸ್ ಮೇಂಟೇನ್ ಮಾಡಿ, ಅವರನ್ನು ದೂರ ಇಡಲು ನೀವೇ ಪ್ರಯತ್ನಿಸಿ.
ಅಕಸ್ಮಾತ್ ದೂರ ಇಡಲು ಸಾಧ್ಯ ಆಗದೇ ಇದ್ದರೆ ಮಾತುಗಳಲ್ಲಿಯೇ ಒಂದು ಬೌಂಡರಿ ಸೆಟ್ ಮಾಡಿ, ಅದನ್ನು ಮೀರಿದರೆ ರಿಲೇಶನ್ಶಿಪ್ಗೆ ಅಂತ್ಯ ಹಾಕಿ.
ಅವರಿಂದಾಗಿ ಯಾವುದೇ ಸಮಸ್ಯೆಗೆ ತುತ್ತಾಗಬೇಡಿ, ಸಮಸ್ಯೆ ಒಳಗೆ ನಿಮ್ಮನ್ನು ಎಳೆದುಕೊಳ್ಳುತ್ತಿದ್ದಾರೆ ಎಂದೆನಿಸಿದರೆ ತಕ್ಷಣ ಹೊರಬನ್ನಿ.
ಪಾಸಿಟಿವ್ ಜನರ ಜೊತೆ ಹೆಚ್ಚು ಸಮಯ ಕಳೆಯಿರಿ, ಆಗ ನಿಮಗೆ ನೆಗೆಟಿವ್ ಜನರಿಂದ ನಿಮ್ಮ ಲೈಫ್ ಎಷ್ಟು ಹಾಳಾಗುತ್ತಿದೆ ಎಂದು ತಿಳಿಯುತ್ತದೆ.