ಭಾರತದ ಇತಿಹಾಸದಲ್ಲಿ ಯಾವುದೇ ಚುನಾವಣಾ ಪೂರ್ವ ಮೈತ್ರಿ ಸಫಲವಾಗಿಲ್ಲ: ಎನ್‌ಡಿಎ ಹೊಗಳಿದ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಭಾರತದ ಮೈತ್ರಿ ಇತಿಹಾಸದಲ್ಲಿ ಎನ್‌ಡಿಎ ರೀತಿ ಯಾವುದೇ ಚುನಾವಣಾ ಪೂರ್ವ ಮೈತ್ರಿ ಸಫಲವಾಗಿಲ್ಲ. ಆದರೆ ನಮ್ಮ ಮೈತ್ರಿ ಸಾಧನೆ ಮಾಡಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದು ಮೈತ್ರಿಯ ವಿಜಯವಾಗಿದೆ. ನಾವು ಬಹುಮತ ಪಡೆದಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ  ಎನ್‌ಡಿಎ ಮೈತ್ರಿಯನ್ನು ಕೊಂಡಾಡಿದ್ದಾರೆ.

ಸಂಸತ್‌ ಭವನದ ಸೆಂಟ್ರಲ್‌ ಹಾಲ್‌ನಲ್ಲಿ ನಡೆದ ಎನ್‌ಡಿಎ ಸಂಸತ್‌ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ನಡೆಸಲು ಬಹುಮತ ಅವಶ್ಯಕತೆ ಇದೆ. ಇದು ಪ್ರಜಾಪ್ರಭುತ್ವ ನಿಯಮ. ಆದರೆ ದೇಶ ನಡೆಸಲು ಸರ್ವಾನುಮತ ಮುಖ್ಯ. ಸರ್ವಾನುಮತದಿಂದ ದೇಶವನ್ನು ಮುನ್ನಡೆಸುಕೊಂಡು ಹೋಗುತ್ತೇವೆ ಎಂದು ನಾನು ದೇಶದ ಜನರಿಗೆ ಭರವಸೆ ನೀಡುತ್ತೇನೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!