ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ 20 ವಿಶ್ವಕಪ್ ನಲ್ಲಿ ಆರೋಪ ಒಂದು ಕೇಳಿಬರುತ್ತಿದ್ದು, ಯುಎಸ್ಎ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಸಮಯದಲ್ಲಿ ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ್ ರೌಫ್ ‘ಬಾಲ್ ವಿರೂಪ ‘ ಮಾಡಿದ್ದಾರೆ ಎಂದು ಯುಎಸ್ಎ ಕ್ರಿಕೆಟಿಗ ರಸ್ಟಿ ಥೆರಾನ್ ಆರೋಪಿಸಿದ್ದಾರೆ.
ಯುಎಸ್ಎ ಇನ್ನಿಂಗ್ಸ್ನ 12 ಓವರ್ನಲ್ಲಿ 94 ರನ್ ಬಾರಿಸಿದ್ದಾಗ ಪಾಕಿಸ್ತಾನ ತಂಡ ಚೆಂಡು ಬದಲಾವಣೆಗೆ ಮನವಿ ಮಾಡಿತ್ತು. ಬದಲಾವಣೆಯ ಒಂದು ಓವರ್ ನಂತರ, ಆಂಡ್ರೀಸ್ ಗೌಸ್ (26 ಎಸೆತಗಳಲ್ಲಿ 35 ರನ್) ಮತ್ತು ಮೊನಾಂಕ್ ಪಟೇಲ್ (38 ಎಸೆತಗಳಲ್ಲಿ 50 ರನ್) ಔಟಾದರು. ತಕ್ಷಣ, ಥೆರಾನ್ ಈ ವಿಷಯವನ್ನು ಪರಿಶೀಲಿಸುವಂತೆ ಐಸಿಸಿಯನ್ನು ಕೇಳಿಕೊಂಡರು. ಈ ವೇಳೆ ಹ್ಯಾರಿಸ್ ಚೆಂಡಿನ ಮೇಲೆ ತನ್ನ ಹೆಬ್ಬೆರಳಿನ ಉಗುರಿನ ಮೂಲಕ ಗೆರೆ ಎಳೆಯುತ್ತಿರುವುದು ಕಂಡಿದೆ ಎಂದು ಆಟಗಾರ ಆರೋಪಿಸಿದ್ದಾರೆ. ಹೀಗಾಗಿ ಪಾಕಿಸ್ತಾನ ಮೋಸದಾಟ ಆಡಿದೆ ಎಂದು ಆರೋಪಿಸಿದ್ದಾರೆ. .
ಈ ಕುರಿತು ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡ ಥೆರಾನ್, ಐಸಿಸಿ ಈ ಬಗ್ಗೆ ಏನು ಮಾಡುತ್ತಿದೆ. 2 ಓವರ್ ಗಳ ಹಿಂದೆ ಬದಲಾಯಿಸಲಾದ ಚೆಂಡನ್ನು ರಿವರ್ಸ್ ಸ್ವಿಂಗ್ ಮಾಡಲು ಹೇಗೆ ಸಾಧ್ಯ ? ಹ್ಯಾರಿಸ್ ತನ್ನ ಹೆಬ್ಬೆರಳಿನ ಉಗುರುಗಳನ್ನು ಚೆಂಡಿನ ಎಳೆಯುವುದನ್ನು ನೀವು ಅಕ್ಷರಶಃ ನೋಡಬಹುದು ಎಂದು ಬರೆದಿದ್ದಾರೆ.
ಏತನ್ಮಧ್ಯೆ, ಗೌಸ್ ಔಟಾದ ನಂತರ, ಮೊಹಮ್ಮದ್ ಅಮೀರ್ ಮುಂದಿನ ಓವರ್ನಲ್ಲಿ ಯುಎಸ್ಎ ನಾಯಕನನ್ನು ಔಟ್ ಮಾಡುವಲ್ಲಿ ಯಶಸ್ವಿಯಾದರು. ಈ ವೇಳೆ ಅಮೆರಿಕ 14.1 ಓವರ್ಗಳಲ್ಲಿ 111/3 ಸ್ಕೋರ್ ಮಾಡಿತ್ತು. ಆದಾಗ್ಯೂ, ಎರಡು ತ್ವರಿತ ಹೊಡೆತಗಳ ಹೊರತಾಗಿಯೂ, ಆರೋನ್ ಜೋನ್ಸ್ (26 ಎಸೆತಗಳಲ್ಲಿ 36* ರನ್) ಮತ್ತು ನಿತೀಶ್ ಕುಮಾರ್ (14 ಎಸೆತಗಳಲ್ಲಿ 14* ರನ್) ಅವರ ನಿರ್ಣಾಯಕ ಇನ್ನಿಂಗ್ಸ್ಗಳ ಮೂಲಕ ಪಂದ್ಯ ಸಮಬಲಗೊಂಡಿತು. ಅಂತಿಮವಾಗಿ ಸೂಪರ್ ಓವರ್ ಯುಎಸ್ಎ ಗೆಲುವು ಸಾಧಿಸಿತು.