ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಗ್ರಾಮಾಂತರ ಸೋಲಿನಿಂದ ನಾನು ಇನ್ನೂ ಹೊರ ಬಂದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮತ ಹಾಕಿದವರಿಗೆ ಕೃತಜ್ಞತೆ ಸಲ್ಲಿಸೋಣ. ಮತ ಹಾಕದವರ ಹೃದಯವನ್ನೂ ಗೆಲ್ಲಬೇಕು. ಈ ಮಾತನ್ನು ರಾಹುಲ್ ಗಾಂಧಿ ಹೇಳಿದ್ದಾರೆ. ನಾವು ಓವರ್ ಕಾನ್ಫಿಡೆಂಟ್ ಆಗಿ ಇದ್ವಿ. ಅವರು ಒಳ್ಳೆಯ ಸ್ಟ್ರಾಟಜಿ ಮಾಡಿದ್ರು. ನಾನ್ ಕಾಂಟ್ರವರ್ಶಿಯಲ್ ಕ್ಯಾಂಡಿಡೇಟ್ ಹಾಕಿದರು. ದಳದಿಂದ ನಿಲ್ಲಿಸಲಿಲ್ಲ, ಬಿಜೆಪಿಯಿಂದ ಅಭ್ಯರ್ಥಿಗಳನ್ನು ಹಾಕಿದರು ಎಂದರು.
ನಮಗೆ ಬರುವ ಮತಗಳು ಬಂದಿವೆ. ಅವರಿಗೆ ಒಂದೂವರೆ ಲಕ್ಷ ವೋಟು ಹೋಗಿದೆ. ಕನಕಪುರದಲ್ಲಿ 60 ಸಾವಿರ ವೋಟು ನಿರೀಕ್ಷೆ ಇತ್ತು. ಅಲ್ಲಿ 25 ಸಾವಿರ ಮತ ಮಾತ್ರ ಬಂದಿದೆ. ದೇವೇಗೌಡರು ಸೋತಿದ್ರಲ್ಲಾ, ಕುಮಾರಸ್ವಾಮಿನೂ ಸೋತಿದ್ರಲ್ಲ. ಅವರ ಸೊಸೆಯೂ ಸೋತಿದ್ರಲ್ಲ. ನಿಖಿಲ್ ಕೂಡ ಸೋತಿರಲಿಲ್ವೇ. ಈಗ ಸುರೇಶ್ ಸೋತಿದ್ದಾರೆ ಎಂದು ಹೇಳಿದರು.