ಮೇಷ
ಗುಣಾತ್ಮಕ ದಿನ. ಇತರರಿಗೆ ನೆರವು ನೀಡುವ ಮೂಲಕ ಆತ್ಮತೃಪ್ತಿ. ಮನೆಯಲ್ಲಿ ಕಿರಿಯರಿಂದ ಆನಂದ. ಖರ್ಚು ಹೆಚ್ಚಿದರೂ ಬೇಸರವಿಲ್ಲ.
ವೃಷಭ
ನೀವು ಬಯಸಿದಂತೆ ದಿನ ಸಾಗಲಿದೆ. ಉದ್ದೇಶ ಪ್ರಾಪ್ತಿ. ಮನಸ್ಸು ಬೇಸರಗೊಳಿಸುವ ಪ್ರಸಂಗ ಉಂಟಾದರೂ ಸಂಜೆ ವೇಳೆಗೆ ಸರಿಯಾಗಲಿದೆ.
ಮಿಥುನ
ಈ ದಿನ ಉತ್ಸಾಹ ದಿಂದ ಕಳೆಯುವುದು. ಕುಟುಂಬ ಸದಸ್ಯರ ಜತೆ ಆತ್ಮೀಯ ಕಾಲಕ್ಷೇಪ. ಸಮಸ್ಯೆ ಮರೆತು ದಿವಸ ಆನಂದಿಸಿ.
ಕಟಕ
ಕೆಲವರ ವರ್ತನೆ ನಿಮ್ಮಲ್ಲಿ ಅಸಹನೆ ತುಂಬಬಹುದು.ಮನಸ್ಸು ಹಾಳು ಕೆಡಿಸಿಕೊಳ್ಳದಿರಿ. ಇಂದಿನ ದಿನ ಆನಂದಿಸಲು ಇರುವುದು.
ಸಿಂಹ
ಭಾವುಕ ಸನ್ನಿವೇಶ ಎದುರಾಗಲಿದೆ. ಮನಸ್ಸು ದೃಢ ಮಾಡಿಕೊಳ್ಳಿ. ಕೌಟುಂಬಿಕ ಜಗಳಕ್ಕೆ ಆಸ್ಪದ ಕೊಡಬೇಡಿ. ಹೊಂದಾಣಿಕೆ ಮುಖ್ಯವಾಗಲಿದೆ.
ಕನ್ಯಾ
ದೈಹಿಕ ಶ್ರಮ ಅಥವಾ ಮಾನಸಿಕ ಒತ್ತಡದಿಂದ ಅಶಾಂತ ಮನಸ್ಸು. ನಿಮಗೆ ತುಸು ವಿಶ್ರಾಂತಿಯ ಅಗತ್ಯವಿದೆ. ಬಂಧುಗಳ ಸಹಕಾರ.
ತುಲಾ
ಕೌಟುಂಬಿಕ ಸಮ್ಮಿಲನ. ಸಣ್ಣ ಪುಟ್ಟ ಸಮಸ್ಯೆ ಬಾಽಸಿದರೂ ಅದನ್ನು ಗಂಭೀರವಾಗಿ ಪರಿಗಣಿಸಬೇಡಿ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ.
ವೃಶ್ಚಿಕ
ಖಾಸಗಿ ಬದುಕಿಗೆ ಹೆಚ್ಚಿನ ಗಮನ ಕೊಡಿ. ಇತರ ವಿಷಯಗಳ ಭರದಲ್ಲಿ ವೈಯಕ್ತಿಕ ಜೀವನ ಕಡೆಗಣಿಸಬೇಡಿ. ಪ್ರೀತಿಯಲ್ಲಿ ಯಶ.
ಧನು
ಯಾವುದೇ ಕೆಲಸ ಬಾಕಿ ಉಳಿಸಬೇಡಿ. ಸಕಾಲದಲ್ಲಿ ಮುಗಿಸಿರಿ. ಕೌಟುಂಬಿಕ ಸಾಮರಸ್ಯ ಕಾಪಾಡಿ. ಸಣ್ಣ ವಿಷಯಕ್ಕೆ ವಾಗ್ವಾದ ನಡೆಸದಿರಿ.
ಮಕರ
ನೆಗೆಟಿವ್ ಚಿಂತನೆ ಮನದಿಂದ ದೂರವಾಗುವುದು.ಮನೆಯಲ್ಲಿ ಶಾಂತಿ, ಸಂತೋಷ. ಕೆಲಸದ ಒತ್ತಡ ನಿವಾರಣೆ.
ಕುಂಭ
ನಿಮ್ಮ ವ್ಯವಹಾರದಲ್ಲಿ ಇತರರು ಮೂಗು ತೂರಿಸಲು ಅವಕಾಶ ಕೊಡದಿರಿ. ಆತ್ಮೀಯರ ಸೋಗಿನಲ್ಲಿರುವ ವಂಚಕರ ಕುರಿತು ಎಚ್ಚರಿಕೆಯಿಂದಿರಿ.
ಮೀನ
ನಿಮ್ಮ ಆದ್ಯತೆಯ ವಿಷಯವನ್ನು ಕಡೆಗಣಿಸಬೇಡಿ. ಕೆಲಸ, ಕುಟುಂಬ ಮತ್ತು ಹೊಣೆಗಾರಿಕೆಯ ಮಧ್ಯೆ ಸಮತೋಲನ ಸಾಧಿಸಿ.



